ಕರ್ನಾಟಕ

karnataka

ETV Bharat / state

ಎಡಬಿಡದೇ ಸುರಿಯುತ್ತಿರುವ ಮಳೆ..ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ! - ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ

ಕಳೆದ ನಾಲ್ಕೈದು ದಿನಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬೃಹತ್ ಬಂಡೆಯೊಂದು ಮನೆಯಂಗಳಕ್ಕೆ ಉರುಳಿ ಬಂದಿದೆ.

ಎಡಬಿಡದೆ ಸುರಿಯುತ್ತಿರುವ ಮಳೆ.. ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ
ಎಡಬಿಡದೆ ಸುರಿಯುತ್ತಿರುವ ಮಳೆ.. ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ

By

Published : Jul 16, 2021, 10:09 AM IST

Updated : Jul 16, 2021, 10:22 AM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಗುಡ್ಡ ಕುಸಿತದಿಂದ ಬೃಹತ್ ಬಂಡೆಯೊಂದು ಉರುಳಿ ಮನೆಯಂಗಳಕ್ಕೆ ಬಂದಿದೆ. ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿರುವ ಘಟನೆ ಹೊನ್ನಾವರದ ಕಾವೂರಿನಲ್ಲಿ ನಡೆದಿದೆ.

ಎಡಬಿಡದೆ ಸುರಿಯುತ್ತಿರುವ ಮಳೆ.. ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈನಿಕ ಸುರೇಶ್​ಗೌಡ, ಕಳೆದ ವರ್ಷವೂ ಇಂಥದ್ದೇ ಘಟನೆ ಸಂಭವಿಸಿತ್ತು. ಹೊನ್ನಾವರದ ತಹಶೀಲ್ದಾರ್ ಗಮನಕ್ಕೆ ತಂದಿದ್ದೆವು. ಅವರು ಬಂದು ಫೋಟೋ ತೆಗೆದುಕೊಂಡು ಹೋದರಷ್ಟೇ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು ಅದೇ ಪ್ರದೇಶದಲ್ಲಿ ಭೂ ಕುಸಿತು ಉಂಟಾಗಿತ್ತು. ಈಗ ಅದೇ ಪ್ರದೇಶದಲ್ಲಿ ಬಂಡೆಯೊಂದು ಉರುಳಿ ಬಿದ್ದಿದೆ. ಅಲ್ಲದೇ, ಗುಡ್ಡದ ಮೇಲ್ಭಾಗದಲ್ಲಿರುವ ಶಾಲಾ ಕಾಂಪೌಂಡ್ ಕೂಡ ಕುಸಿಯುವ ಭೀತಿ ಎದುರಾಗಿದೆ. ಆದರೂ, ತಾಲೂಕು, ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಈಗಲಾದರೂ ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ಟ್ರಾಲರ್​ ಪಲ್ಟಿ: 9 ಮೀನುಗಾರರ ಶವ ಪತ್ತೆ, ಓರ್ವ ನಾಪತ್ತೆ

Last Updated : Jul 16, 2021, 10:22 AM IST

ABOUT THE AUTHOR

...view details