ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆ ಇಂದೂ ಸಹ ಮುಂದುವರೆದಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಇಂದು ಕಾರವಾರದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ನೆರೆಹಾನಿಯ ಪರಿಶೀಲನೆ ನಡೆಸಲಿದ್ದರು. ಆದ್ರೆ ಅಧಿಕ ಮಳೆಯ ಹಿನ್ನೆಲೆ ಸಿಎಂ ಪ್ರವಾಸ ಮೊಟಕುಗೊಂಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಸಿಎಂ ಪ್ರವಾಸ ಮೊಟಕು
ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಇಂದು ಕಾರವಾರದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ನೆರೆಹಾನಿಯ ಪರಿಶೀಲನೆ ನಡೆಸಲಿದ್ದರು. ಆದ್ರೆ ಅಧಿಕ ಮಳೆ ಹಿನ್ನೆಲೆ ಸಿಎಂ ಪ್ರವಾಸ ಮೊಟಕುಗೊಂಡಿದೆ.
ಸಿಎಂ ಪ್ರವಾಸ ಮೊಟಕು
ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣವಿದೆ. ಇದೇ ವಾತಾವರಣ ಮುಂದುವರಿದ ಹಿನ್ನೆಲೆ ಹೆಲಿಕಾಪ್ಟರ್ ಇಳಿಸಲು ಕಷ್ಟವಾಗುವ ಕಾರಣ ಸಿಎಂ ಪ್ರವಾಸ ಮೊಟಕುಗೊಂಡಿದೆ.
ಇನ್ನು ಕರಾವಳಿಯ, ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರದಲ್ಲಿ ಬೆಳಗ್ಗೆಯಿಂದಲೂ ಮಳೆಯಾಗುತ್ತಿದ್ದು, ಹೊನ್ನಾವರ ಹಾಗೂ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ರ ರಂಗಿನ ಕಟ್ಟೆ ಬಳಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದೆ.