ಕಾರವಾರ(ಉತ್ತರ ಕನ್ನಡ) : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಅಲ್ಲದೇ ಘಟ್ಟದ ಮೇಲ್ಭಾಗದಲ್ಲಿಯೂ ಅಧಿಕವಾಗಿ ಮಳೆ ಆಗುತ್ತಿರುವುದರಿಂದ ಕುಮಟಾ ಹೊನ್ನಾವರ ಭಾಗದಲ್ಲಿ ವ್ಯಾಪಕ ಅನಾಹುತ ಸೃಷ್ಟಿಯಾಗಿದೆ. ಅಘನಾಶಿನಿ, ಶರಾವತಿ ನದಿ ಹಾಗೂ ಇವುಗಳಿಗೆ ಸೇರುವ ಹೊಳೆಗಳಲ್ಲಿ ಯಥೇಚ್ಛವಾಗಿ ನೀರು ಹರಿದುಬರುತ್ತಿದೆ. ಕೆಲವು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ರಕ್ಷಣೆ ಕಾರ್ಯ ಮುಂದುವರೆದಿದೆ.
ಕುಮಟಾ ತಾಲೂಕಿ ಕೊನ್ನಳ್ಳಿ, ಊರಕೇರಿ, ಮೂರೂರು ಗ್ರಾಮದಲ್ಲಿ ಮನೆಗಳಗೆ ನುಗ್ಗಿದೆ. ಹೊನ್ನಾವರ ತಾಲೂಕಿನ ಮಾವಿನಕುರ್ವಾ, ಗುಂಡಬಾಳ, ಚಿಕ್ಕನಕೋಡ, ಹಡಿನಬಾಳ, ಗುಡ್ನಕಟ್ಟು ಗ್ರಾಮಗಳು ಮುಳುಗಡೆಯಾಗಿವೆ. ಈ ಪ್ರದೇಶದಲ್ಲಿ ಸಿಲುಕಿದವರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.