ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಭಾರಿ ಮಳೆ: ತುಂಬಿ ಹರಿಯುತ್ತಿರುವ ನದಿಗಳು... ಅಲ್ಲಲ್ಲಿ ರಸ್ತೆಗಳು ಬಂದ್ - Shirasi latest news

ಕಳೆದೆರೆಡು ದಿನಗಳಿಂದ ಬೆಂಬಿಡದೆ ಮಳೆ ಸುರಿಯುತ್ತಿದ್ದು, ಬೇಡ್ತಿ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ.

Heavy Rain In Shirasi
ಧರೆಗುರುಳಿದ ಮರ

By

Published : Aug 5, 2020, 4:20 PM IST

Updated : Aug 5, 2020, 4:46 PM IST

ಶಿರಸಿ: ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಮಳೆಯ ಜೊತೆಗೆ ಗಾಳಿಯೂ ಸಹ ರಭಸದಿಂದ ಬೀಸುತ್ತಿದ್ದು ಹಲವೆಡೆ ಮರ ಗಿಡಗಳು ಧರೆಗುರುಳಿವೆ. ಇನ್ನು ಮಳೆಯಿಂದ ಹಲವು ಪ್ರಮುಖ ರಸ್ತೆಗಳು ಬಂದ್​ ಆಗಿವೆ.

ಯಲ್ಲಾಪುರದ ಬೇಡ್ತಿ ನದಿ, ಶಿರಸಿ - ಸಿದ್ಧಾಪುರದ ಅಘನಾಶಿನಿ ನದಿಯು ತುಂಬಿ ಹರಿಯುತ್ತಿದ್ದು, ಸಿದ್ದಾಪುರದ ಸರಕುಳಿ ಸೇತುವೆಯ ಮೇಲೆ ನೀರು ಹರಿದಿದೆ.

ಹಲವು ಪ್ರದೇಶಗಳಲ್ಲಿ ಮನೆಗಳಗೂ ನೀರು ನುಗ್ಗಿದೆ. ಗಾಳಿಯಿಂದ ಬನವಾಸಿ ರಸ್ತೆ ಬ್ಲಾಕ್ ಆಗಿದ್ದು, ಸಾಕಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಿನ್ನೆ ರಾತ್ರಿಯಿಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸುವಲ್ಲಿ ನಿರತರಾಗಿದ್ದು, ಹಲವೆಡೆ ಟ್ರಾನ್ಸ್​ಫಾರ್ಮರ್​​ಗಳು ಸಹ ಸುಟ್ಟು ಹೋಗಿದೆ.

Last Updated : Aug 5, 2020, 4:46 PM IST

ABOUT THE AUTHOR

...view details