ಶಿರಸಿ: ಅತಿ ವೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಯರೇಬೈಲ್ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ. ಪ್ರವಾಹದ ನೀರಿಗೆ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 260 ಜನರನ್ನು ರಕ್ಷಿಸಲಾಗಿದೆ.
ಶಿರಸಿಯಲ್ಲೂ ವರುಣನ ಮುನಿಸು: ಹಲವು ಗ್ರಾಮಗಳಿಗೆ ಜಲ ದಿಗ್ಬಂಧನ
ಅತಿ ವೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಯರೇಬೈಲ್ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ. ಪ್ರವಾಹದ ನೀರಿಗೆ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 260 ಜನರನ್ನು ರಕ್ಷಿಸಲಾಗಿದೆ.
ನಂದಿಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಯರೇಬೈಲ್ ಗ್ರಾಮಕ್ಕೆ ಏಕಾಏಕಿ ಹಳ್ಳದ ನೀರು ಬೃಹತ್ ಪ್ರಮಾಣದಲ್ಲಿ ಹರಿದು ಬಂದದ್ದರಿಂದ ಇಡೀ ಗ್ರಾಮ ಜಲಾವೃತವಾಗಿದೆ. ಮಾಹಿತಿ ತಿಳಿದ ತಕ್ಷಣ ತಾಲೂಕು ಆಡಳಿತವು ಬೋಟ್ ಮೂಲಕ ಗ್ರಾಮದ 260 ಜನರನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ಕರೆತಂದಿದೆ.
ಇಡೀ ಗ್ರಾಮ ಜಲಾವೃತವಾದ ಕಾರಣ ಹಲವು ಮನೆಗಳಿಗೆ ಹಾನಿಯಾಗಿದೆ. ಇನ್ನು ಜಾನುವಾರುಗಳ ರಕ್ಷಣೆ ಆಗಬೇಕಿದೆ. ಮುಂಡಗೋಡ ತಾಲೂಕು ಅರೆ ಮಲೆನಾಡು ವ್ಯಾಪ್ತಿಯಲ್ಲಿ ಬರುವಂತಾಗಿದ್ದು, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗುರುವಾರ 112 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 927 ಮಿ.ಮೀ. ಮಳೆಯಾಗಿದೆ.