ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್: ಕಾರವಾರದಲ್ಲಿ ಮಳೆ - ಸೈಕ್ಲೋನ್ ಮುನ್ಸೂಚನೆ

ಕಾರವಾರ ಸೇರಿದಂತೆ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಜನ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

heavy-rain-in-karwar
ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್, ಕಾರವಾರದಲ್ಲಿ ಮಳೆ

By

Published : May 13, 2021, 12:46 PM IST

Updated : May 13, 2021, 2:33 PM IST

ಕಾರವಾರ:ಸೈಕ್ಲೋನ್ ಮುನ್ಸೂಚನೆ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಮಳೆ ಸುರಿಯಲಾರಂಭಿಸಿದ್ದು, ಕಾರವಾರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು, ಮೋಡ‌ ಕವಿದ ವಾತಾವರಣ ಮುಂದುವರೆದಿದೆ.

ಕಾರವಾರ ಸೇರಿದಂತೆ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಜನ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಎಲ್ಲೆಡೆ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ.

ಕಾರವಾರದಲ್ಲಿ ಸುರಿಯುತ್ತಿರುವ ಮಳೆ

ಭಾರತೀಯ ಹವಮಾನ ಇಲಾಖೆ ಅರಬ್ಬಿ ಸಮುದ್ರದಲ್ಲಿ ಮೇ 15ರಂದು ಚಂಡಮಾರುತ ಏಳುವ ಬಗ್ಗೆ ಮುನ್ಸೂಚನೆ ನೀಡಿದ್ದು, ಈಗಾಗಲೇ ಮೀನುಗಾರಿಕೆಗೆ ತೆರಳಿದ ಬೋಟ್​ಗಳು ವಾಪಸ್​ ಆಗಿವೆ. ಎರಡು ದಿನದಲ್ಲಿ ಗಾಳಿ ಮಳೆ ಸಹಿತ ಸೈಕ್ಲೋನ್ ಎಫೆಕ್ಟ್ ಇರುವ ಸಾಧ್ಯತೆ ಇರುವ ಬೆನ್ನಲ್ಲೇ ಇದೀಗ ಮಳೆಯಾಗುತ್ತಿದೆ.

ಇದನ್ನೂ ಓದಿ:ರಾಜ್ಯದಲ್ಲಿ 2ನೇ ಡೋಸ್​ ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Last Updated : May 13, 2021, 2:33 PM IST

ABOUT THE AUTHOR

...view details