ಕಾರವಾರ: ಕಳೆದ ಮೂರು ದಿನಗಳಿಂದ ಮಾಯವಾಗಿದ್ದ ಮಳೆರಾಯ ಮತ್ತೆ ಜಿಲ್ಲೆಗೆ ಆಗಮಿಸಿದ್ದು, ಕರಾವಳಿಯಲ್ಲಿ ಇಂದು ಬೆಳಗ್ಗೆಯಿಂದ ಗುಡುಗು ಸಹಿತ ಭಾರಿ ಮಳೆಯಾಯಾಯಿತು.
3 ದಿನಗಳ ನಂತರ ಮಳೆರಾಯ ಪ್ರತ್ಯಕ್ಷ... ಕಾರವಾರದ ರೈತರ ಮುಖದಲ್ಲಿ ಮಂದಹಾಸ - undefined
ಕಾರವಾರವಾರದಲ್ಲಿ ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು, ಸತತ ಎರಡು ಗಂಟೆಗಳ ಕಾಲಮಳೆ ಸುರಿಯಿತು. ಅಷ್ಟೇ ಅಲ್ಲದೆ ಅಂಕೋಲಾ, ಕುಮಟಾ ಹೊನ್ನಾವರಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಜಿಲ್ಲಾ ಕೇಂದ್ರ ಕಾರವಾರವಾರದಲ್ಲಿ ಬೆಳಗ್ಗೆಯಿಂದಲೇ ಶುರುವಾಯಿತು. ಸತತ ಎರಡು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು. ಅಷ್ಟೇ ಅಲ್ಲದೆ ಅಂಕೋಲಾ, ಕುಮಟಾ ಹೊನ್ನಾವರಗಳಲ್ಲಿ ಕೂಡ ಗುಡುಗು ಸಿಡಿಲು ಸಹಿತ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಗುಡುಗು ಸಿಡಿಲು ಇರುವ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ವಾರದ ಹಿಂದೆ ಅಬ್ಬರಿಸಿದ್ದ ಮಳೆರಾಯ ಕಳೆದ ಮೂರ್ನಾಲ್ಕು ದಿನಗಳಿಂದ ಮಾಯವಾಗಿ ಎಲ್ಲೆಡೆ ಉರಿ ಬಿಸಿಲು ಪ್ರಾರಂಭವಾಗಿತ್ತು. ವ್ಯವಸಾಯಕ್ಕೆ ಭೂಮಿ ಹದಗೊಳಿಸುತ್ತಿದ್ದ ರೈತರು ಮಳೆಯಿಲ್ಲದೆ ಆತಂಕದಿಂದಲೇ ಮುಗಿಲು ನೋಡುವಂತಾಗಿತ್ತು. ಆದರೆ ಇಂದು ಉತ್ತಮ ಮಳೆಯಾಗಿದ್ದು, ಮಳೆ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಬಯಕೆ.