ಕರ್ನಾಟಕ

karnataka

ETV Bharat / state

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ... ಗಂಗಾವಳಿ ನದಿ ತೀರದ ಪ್ರದೇಶಗಳು ಜಲಾವೃತ! - Gangavali river band drown

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರದಿಂದ ಎಡಬಿಡದೆ ಭಾರೀ ಮಳೆ‌ ಸುರಿಯುತ್ತಿದೆ. ಗಂಗಾವಳಿ ನದಿ ಪಾತ್ರದಲ್ಲಿರುವ ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹದ ಭೀತಿ ಎದುರಾಗಿದೆ.

Heavy rain in Karwar district
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ... ಗಂಗಾವಳಿ ನದಿ ಪಾತ್ರಗಳು ಜಲಾವೃತ!

By

Published : Jul 8, 2020, 12:24 PM IST

Updated : Jul 8, 2020, 1:01 PM IST

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರದಿಂದ ಭಾರೀ ಮಳೆ‌ಯಾಗುತ್ತಿದ್ದು, ಗಂಗಾವಳಿ ನದಿ ಪಾತ್ರದಲ್ಲಿರುವ ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹದ ಭೀತಿ ಎದುರಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ... ಗಂಗಾವಳಿ ನದಿ ತೀರದ ಪ್ರದೇಶಗಳು ಜಲಾವೃತ!

ಜಿಲ್ಲೆಯಾದ್ಯಂತ ಎಡಬಿಡದೆ ಭಾರಿ ಮಳೆಯಾಗುತ್ತಿದ್ದು, ಇನ್ನು ಕೂಡ ಮುಂದುವರಿದಿದೆ. ನಿರಂತರ ಮಳೆಗೆ ಅಂಕೋಲಾದಲ್ಲಿ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು, ರಸ್ತೆ, ಗದ್ದೆ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕ್ಷಣ ಕ್ಷಣಕ್ಕೂ ಮಳೆ ಅಬ್ಬರ ಜೋರಾಗಿದ್ದು, ನದಿ ಹಾಗೂ ಸಮುದ್ರ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ.

ಇದಲ್ಲದೆ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ‌ಯೂ ಕೂಡ ಮಳೆ ಮುಂದುವರಿದಿದೆ. ಸದ್ಯ ಗಾಳಿ ಸಹಿತ ಮಳೆಯಿಂದಾಗಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜಿಲ್ಲೆಯ ಕರಾವಳಿ ಭಾಗದ ಜನರಲ್ಲಿ ಪ್ರವಾಹದ ಆತಂಕ ಮನೆಮಾಡಿದೆ.

Last Updated : Jul 8, 2020, 1:01 PM IST

ABOUT THE AUTHOR

...view details