ಕರ್ನಾಟಕ

karnataka

ETV Bharat / state

ಮುರುಡೇಶ್ವರ ಕಡಲ ತೀರದಲ್ಲಿ ಅಲೆಗಳ ಅಬ್ಬರ: ಕೊಚ್ಚಿಹೋದ ಗೂಡಂಗಡಿಗಳು

ಭಟ್ಕಳ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆ, ಗಾಳಿಯಿಂದ ಪ್ರವಾಸಿ ತಾಣ ಮುರುಡೇಶ್ವರದ ಕಡಲ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡ ಅಂಗಡಿಗಳಿಗೆ ಅಪ್ಪಳಿಸಿವೆ. ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮರ ಬಿದ್ದು ಎರಡು ಮನೆಗಳು ಜಖಂಗೊಂಡಿವೆ.

By

Published : Oct 24, 2019, 2:44 PM IST

ಭಟ್ಕಳ ತಾಲೂಕಿನದ್ಯಂತ ಭಾರಿ ಮಳೆ, ಗಾಳಿ

ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಭಾರಿ ಗಾಳಿ, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು. ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಏರಿಳಿತ ಜೋರಾಗಿದ್ದು, ದಡದಲ್ಲಿನ ದೋಣಿ ಹಾಗೂ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ತೇಲಿ ಹೋಗಿವೆ.

ಭಟ್ಕಳ ತಾಲೂಕಿನದ್ಯಂತ ಭಾರಿ ಮಳೆ, ಗಾಳಿ

ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಹವಮಾನ ವೈಪರಿತ್ಯ ಉಂಟಾಗಿದ್ದು, ಬೆಳಗ್ಗೆ ಸಮಯದಲ್ಲಿ ಚಳಿ ಆವರಿಸಿಕೊಂಡು, ಮಧ್ಯಾಹ್ನವಾಗುತ್ತಿದಂತೆ ಉರಿ ಬಿಸಿಲು ಕಾಣಿಸಿಕೊಳ್ಳುತ್ತದೆ. ಸಂಜೆ ಆಗುತ್ತಿದಂತೆ ಮತ್ತೆ ಮಳೆ, ಗುಡುಗು ಆರಂಭವಾಗುತ್ತಿದೆ.

ಮರ ಬಿದ್ದು ಮನೆಗೆ ಜಖಂ:ಮುರುಡೇಶ್ವರದ ಕಾಯ್ಕಿಣಿ ಪಂಚಾಯಿತ ವ್ಯಾಪ್ತಿಯ ಬೆದರು ಮನೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಗೋಳಿಮರ ಕುಸಿದು ಎರಡು ಮನೆಗಳು ಸಂಪೂರ್ಣ ಜಖಂ ಆಗಿವೆ.

ಮಾದೇವಿ ನಾಯ್ಕ, ಮಂಜಮ್ಮ ಎಂ ನಾಯ್ಕ ಎನ್ನುವವರ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಗ್ಯಾಸ್ ಸೋರಿಕೆ ಆತಂಕದ ಹಿನ್ನಲೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details