ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಭಾರೀ ಮಳೆ: ಕೊಯ್ಲಾದ ಭತ್ತ ಸಂಪೂರ್ಣ ನೀರುಪಾಲು - ಹೊನ್ನಾವರದಲ್ಲಿ ಮಳೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಕುಮಟ ತಾಲೂಕಿನಲ್ಲಿ ನಿನ್ನೆ ರಾತ್ರಿ ಮಳೆಯ ಅಬ್ಬರ ಜೋರಾದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಭತ್ತ, ಬಾಳೆ ಸೇರಿದಂತೆ ಅಡಿಕೆ ಬೆಳೆಗಳು ಸಂಪೂರ್ಣವಾಗಿ ನೀರುಪಾಲಾಗಿವೆ.

Heavy Rain
ನೀರು ಪಾಲದ ಭತ್ತದ ಬೆಳೆ

By

Published : Oct 22, 2020, 1:16 PM IST

ಉತ್ತರ ಕನ್ನಡ: ಜಿಲ್ಲೆಯ ಕರಾವಳಿ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೊನ್ನಾವರ ಸೇರಿದಂತೆ ವಿವಿಧೆಡೆ ಕೃಷಿ ಭೂಮಿಗಳಿಗೆ ನೀರು ನುಗ್ಗಿ ಕೊಯ್ಲು ಮಾಡಿದ್ದ ಭತ್ತ ಸೇರಿದಂತೆ ಸಾಕಷ್ಟು ಬೆಳೆಗಳು ನೀರುಪಾಲಾಗಿವೆ.

ನೀರುಪಾಲದ ಭತ್ತದ ಬೆಳೆ

ಹೊನ್ನಾವರ ತಾಲೂಕಿನ ಕಡ್ನೀರು, ಹೊದ್ಕೆ, ಶಿರೂರು, ಚಂದಾವರ ಹಾಗೂ ಕುಮಟಾದ ಸಂತೆಗುಳಿ ಭಾಗದಲ್ಲಿ ವರುಣ ಅಬ್ಬರಿಸಿದ್ದು, ಕೊಯ್ಲು ಮಾಡಿದ ಗದ್ದೆಗೆ ನೀರು ನುಗ್ಗಿ ಭತ್ತದ ಬೆಳೆ ಸಂಪೂರ್ಣವಾಗಿ ನಾಶಗೊಂಡಿದೆ. ಬಾಳೆ, ಅಡಿಕೆ ತೋಟಗಳಿಗೂ ನೀರು ನುಗ್ಗಿದ ಪರಿಣಾಮ ಫಸಲಿಗೆ ಬಂದಿದ್ದ ಬೆಳೆ ರೈತನ ಕೈ ಸೇರುವ ಬದಲು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಕುಮಟಾ, ಹೊನ್ನಾವರ ಭಾಗದ ಬಹುತೇಕ ಸಣ್ಣ ಪುಟ್ಟ ಹಳ್ಳ-ಕೊಳ್ಳಗಳು ತುಂಬಿ ಹರಿಯಲಾರಂಭಿಸಿಸ್ದು, ಕೃಷಿ ಜಮೀನುಗಳಿಗೆ ಮಾತ್ರವಲ್ಲದೆ ಕೆಲ ಮನೆಗಳಿಗೂ ಹಾನಿಯುಂಟು ಮಾಡಿದೆ.

ABOUT THE AUTHOR

...view details