ಕಾರವಾರ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ ಜೋರಾದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಶನಿವಾರ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಗಾಳಿ ಮಳೆ ಅಬ್ಬರ: ಕಾರವಾರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!
ಕಳೆದ ಎರಡು ದಿನದಿಂದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಇಡಿ ದಿನ ಮಳೆಯಾಗಿದೆ. ಅಲ್ಲದೇ ಹವಮಾನ ಇಲಾಖೆ ಕೂಡ ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆ ಜಿಲ್ಲೆಯ ಕರಾವಳಿ ಭಾಗದ ಶಾಲಾ, ಕಾಲೇಜು ಹಾಗೂ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಎರಡು ದಿನದಿಂದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಇಡೀ ದಿನ ಧಾರಾಕಾರವಾಗಿ ಸುರಿದಿದೆ. ಅಲ್ಲದೆ ಹವಮಾನ ಇಲಾಖೆ ಕೂಡ ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ಶಾಲಾ, ಕಾಲೇಜು ಹಾಗೂ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಅದರಂತೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸುವಂತೆ ಹಾಗೂ ಶನಿವಾರದ ತರಗತಿಯನ್ನು ಬೇರೊಂದು ದಿನ ಸರಿದೂಗಿಸುವಂತೆ ಬಿಇಒಗಳಿಗೆ ಸೂಚಿಸಿ ಡಿಡಿಪಿಐ ಎನ್.ಜಿ.ನಾಯಕ್ ಆದೇಶಿಸಿದ್ದಾರೆ.