ಕಾರವಾರ: ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗುತ್ತಲೇ ಇದೆ. ಕಳೆದ ಕೆಲದಿನಗಳಿಂದ ಜ್ವರದಿಂದ ಬಳಲುತಿದ್ದ ಮದುಮಗನೋರ್ವ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ಸೋಮವಾರ ನಡೆದಿದೆ.
ಇಂದು ನಡೆಯಬೇಕಿದ್ದ ಮದುವೆ ಮುಂದೂಡಲಾಗಿತ್ತು... ಆದ್ರೆ ಈಗ ಕೊರೊನಾಗೆ ಮದುಮಗನೇ ಬಲಿ - ಕರ್ನಾಟಕದಲ್ಲಿ ಆಮ್ಲಜನಕ ಸಮಸ್ಯೆ
ಕಾರವಾರದಲ್ಲಿ ಕೋವಿಡ್ಗೆ ಮದುಮಗ ಬಲಿಯಾಗಿದ್ದಾನೆ. 32 ವರ್ಷದ ರೋಶನ್ ಪಡುವಳಕರ ಮೃತ ಯುವಕ.
![ಇಂದು ನಡೆಯಬೇಕಿದ್ದ ಮದುವೆ ಮುಂದೂಡಲಾಗಿತ್ತು... ಆದ್ರೆ ಈಗ ಕೊರೊನಾಗೆ ಮದುಮಗನೇ ಬಲಿ ಕಾರವಾರದಲ್ಲಿ ಕೊರೊನಾಗೆ ಮದುಮಗ ಸಾವು](https://etvbharatimages.akamaized.net/etvbharat/prod-images/768-512-11631858-thumbnail-3x2-kwr.jpg)
ನಗರದ ನಂದನಗದ್ದಾ ನಿವಾಸಿ ರೋಶನ್ ಪಡುವಳಕರ (32) ಮೃತ ದುರ್ದೈವಿ. ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಕೆಲ ದಿನಗಳ ಹಿಂದೆ ಮದುವೆ ನಿಶ್ಚಯವಾಗಿದ್ದರಿಂದ ಕಾರವಾರಕ್ಕೆ ಆಗಮಿಸಿದ್ದ. ಈ ನಡುವೆ ಯುವಕನಲ್ಲಿ ಜ್ವರ ಕಾಣಿಸಿಕೊಂಡಿದ್ದು, ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದ ಎನ್ನಲಾಗಿದೆ.
ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕೋವಿಡ್ ಪತ್ತೆಯಾಗಿತ್ತು. ಜ್ವರದ ಹಿನ್ನೆಲೆಯಲ್ಲಿ ಮೇ.4 ರಂದು ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.