ಕಾರವಾರ:ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದ ರೋಲರ್ ಹಾಕಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಶುಕ್ರವಾರ ಮನೆಗೆ ಆಗಮಿಸಿದ ಕೀರ್ತಿ ಯಲ್ಲಪ್ಪ ಹುಕ್ಕೇರಿಯನ್ನು ಕಾರವಾರದ ಕೈಗಾ ಟೌನ್ ಶಿಪ್ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರೋಲರ್ ಹಾಕಿಯಲ್ಲಿ ಕನ್ನಡತಿಯ ಅದ್ಭುತ ಸಾಧನೆ... ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ - undefined
ರೋಲರ್ ಹಾಕಿ ವಿಶ್ಬ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಏಕೈಕ ಸ್ಪರ್ಧಾಳು ಕೀರ್ತಿ ಹುಕ್ಕೇರಿಗೆ ತನ್ನ ತವರಿಗೆ ಮರಳಿದಾಗ ಅದ್ದೂರಿಯಾದ ಸ್ವಾಗತ ದೊರೆತಿದೆ.
![ರೋಲರ್ ಹಾಕಿಯಲ್ಲಿ ಕನ್ನಡತಿಯ ಅದ್ಭುತ ಸಾಧನೆ... ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ](https://etvbharatimages.akamaized.net/etvbharat/prod-images/768-512-3890774-thumbnail-3x2-vickyjpg.jpg)
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಜು. 4 ರಿಂದ 14ರ ವರೆಗೆ ನಡೆದ ಚಾಂಪಿಯನ್ಶಿಪ್ನಲ್ಲಿ ಕೀರ್ತಿ ಯಲ್ಲಪ್ಪ ಹುಕ್ಕೇರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 81 ದೇಶಗಳು ಪಾಲ್ಗೊಂಡಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಐದನೇ ಸ್ಥಾನ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೀರ್ತಿ ಹುಕ್ಕೇರಿ 3 ಗೋಲುಗಳನ್ನು ದಾಖಲಿಸಿದ್ದರು. ಶುಕ್ರವಾರ ಮರಳಿ ಕಾರವಾರದ ಕೈಗಾಗೆ ಆಗಮಿಸಿದ ಕೀರ್ತಿಯನ್ನು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ತರಬೇತುದಾರ ದಿಲೀಪ್ ಹಣಬರ್, ಹೆತ್ತವರು ಹಾಗೂ ಗೆಳೆಯರು ಸೇರಿದಂತೆ ಕೈಗಾ ನಿವಾಸಿಗಳು ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು.
ಕೀರ್ತಿ ಹುಕ್ಕೇರಿ, ಕೈಗಾ ಅಣು ವಿದ್ಯುತ್ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಕರ್ನಾಟಕದಿಂದ ಏಕೈಕ ಸ್ಪರ್ಧಾಳುವಾಗಿ ಆಯ್ಕೆಯಾಗಿದ್ದ ಕೀರ್ತಿ ಗುಜರಾತ್ನ ನಂದುಬಾರ್ನಲ್ಲಿ ನಡೆದ ರಾಷ್ಟ್ರೀಯ ರೋಲರ್ ಹಾಕಿ ಶಿಬಿರದಲ್ಲಿ ತರಬೇತಿ ಪಡೆದಿದ್ದರು.