ಕರ್ನಾಟಕ

karnataka

ETV Bharat / state

ನಿವೃತ್ತರಾಗಿ ತವರಿಗೆ ಬಂದ ಯೋಧರಿಗೆ ಅದ್ಧೂರಿ ಸ್ವಾಗತ.. ದೇಶ ಸೇವೆಗೆ ಸಂದ ಗೌರವ - ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಮೂವರು ಯೋಧರಿಗೆ ಅದ್ಧೂರಿ ಸ್ವಾಗತ

ದಶಕಗಳಿಗೂ ಅಧಿಕ ಕಾಲ‌ ದೇಶ ಸೇವೆ ಮಾಡಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಮೂವರು ಯೋಧರಿಗೆ ಕಾರವಾರ ತಾಲೂಕಿನ ಹಳಗೆಜೂಗ್ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.

soldiers
ಯೋಧರಿಗೆ ಅದ್ಧೂರಿ ಸ್ವಾಗತ

By

Published : Apr 2, 2022, 7:05 AM IST

ಕಾರವಾರ: ದೇಶಕ್ಕಾಗಿ ದಶಕಗಳಿಗೂ ಹೆಚ್ಚು ಕಾಲ‌ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಮೂವರು ಯೋಧರನ್ನು ಕಾರವಾರ ತಾಲೂಕಿನ ಹಳಗೆಜೂಗ್ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು. ಕರ್ನಾಟಕ-ಗೋವಾ ಗಡಿ ಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಮೂಲಕ ಗ್ರಾಮಕ್ಕೆ ಪ್ರವೇಶಿಸಿದ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿಕೊಂಡು ಊರಿಗೆ ಕರೆತರಲಾಯಿತು.

ಸುಭಾಶ್ಚಂದ್ರ ಮತ್ತು ಸಚಿನ್ 17 ವರ್ಷ ದೇಶ ಸೇವೆ ಸಲ್ಲಿಸಿದ್ದಾರೆ. ಸರ್ವೇಶ್ ಎಂ ನಾಯ್ಕ 22 ವರ್ಷಗಳ ಕಾಲ ಭಾರತಾಂಬೆ ಸೇವೆ ಮಾಡಿ ಗುರುವಾರ ನಿವೃತ್ತರಾಗಿದ್ದರು. ಯೋಧರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಊರಿನ ಹಿರಿಯರು, ಮುಖಂಡರು, ಮಹಿಳೆಯರು, ಮಕ್ಕಳು ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಿದರು. ಈ ವೇಳೆ ಗ್ರಾಮಸ್ಥರ ಪ್ರೀತಿ ಕಂಡು ಅಚ್ಚರಿಗೊಂಡ ಯೋಧರು, ಎಲ್ಲರಿಗೂ ನಮಸ್ಕರಿಸಿ ಧನ್ಯವಾದ ಸಲ್ಲಿಸಿದರು.

ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಮೂವರು ಯೋಧರಿಗೆ ಅದ್ಧೂರಿ ಸ್ವಾಗತ

ಇದನ್ನೂ ಓದಿ:ಪ್ರಧಾನಿ ಭೇಟಿಯಾದ ರಷ್ಯಾ ವಿದೇಶಾಂಗ ಸಚಿವ: ಮಧ್ಯಸ್ಥಿಕೆ ವಹಿಸುವಂತೆ ಮನವಿ, ಹಿಂಸಾಚಾರ ನಿಲ್ಲಿಸುವಂತೆ ಪಿಎಂ ಕರೆ

ABOUT THE AUTHOR

...view details