ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಅದ್ಧೂರಿ ಹೋಳಿ‌ ಸಂಭ್ರಮ: ಕಡಲಿನಲ್ಲಿ ಮಿಂದೆದ್ದ ಮಂದಿ - ಕಾರವಾರದಲ್ಲಿ ಹೋಳಿ ಸಂಭ್ರಮ

ಕಾರವಾರದಲ್ಲಿ ಜನರು ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಿಸಿದರು. ಪ್ರೀತಿ ಪಾತ್ರರಿಗೆ ಬಣ್ಣ ಎರಚಿ, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಎಂಜಾಯ್​ ಮಾಡಿದರು.

Holi celebration in Karwar
ಕಾರವಾರದಲ್ಲಿ ಅದ್ಧೂರಿ ಹೋಳಿ‌ ಸಂಭ್ರಮ

By

Published : Mar 19, 2022, 10:10 AM IST

ಕಾರವಾರ: ಕಡಲನಗರಿಯಲ್ಲೂ ಬಣ್ಣಗಳ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಜನರು ಪ್ರೀತಿ ಪಾತ್ರರಿಗೆ ಬಣ್ಣ ಎರಚಿ, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಹೋಳಿಯನ್ನು ಎಂಜಾಯ್​ ಮಾಡಿದರು.

ಕಾರವಾರದಲ್ಲಿ ಅದ್ಧೂರಿ ಹೋಳಿ‌ ಸಂಭ್ರಮ

ಕಳೆದೆರಡು ವರ್ಷದಿಂದ ಕೊರೊನಾದಿಂದಾಗಿ ಕಳೆಗುಂದಿದ್ದ ಹೋಳಿ ಸಂಭ್ರಮ ಈ ಭಾರಿ ಡಬಲ್ ಆಗಿತ್ತು. ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಹಿರಿಯರು ಕಿರಿಯರೆನ್ನದೆ ಬೆಳಿಗ್ಗೆಯಿಂದಲೇ ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ಖುಷಿಪಟ್ಟರು. ಮಕ್ಕಳೆಲ್ಲ ಪಿಚಕಾರಿಗಳನ್ನು ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದರು.

ಇನ್ನು ನಗರದ ಕೋಡಿಭಾಗದಲ್ಲಿ ಯುವಕರು ಡಿಜೆ ಹಾಡಿಗೆ ನೃತ್ಯ ಮಾಡಿ ಎಂಜಾಯ್​ ಮಾಡಿದರು. ಇತ್ತ ಕಾಜುಭಾಗದ ಗುಜರಾತಿ ತಾಂಡಾದಲ್ಲಿ ಗುಜರಾತಿಗಳು ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿದ್ರೆ, ಯುವತಿಯರು ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಕಾರವಾರದಲ್ಲಿ ಹೋಳಿ ಬಳಿಕ ಸಮುದ್ರಸ್ನಾನ ಮಾಡುವುದು ಸಂಪ್ರದಾಯ.‌ ಹೋಳಿಯಾಡಿದ ಮಂದಿ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ತೆರಳಿ ಸ್ನಾನ ಮಾಡಿ ಎಂಜಾಯ್ ಮಾಡಿದರು.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ ಮೂರು ದಿನ ರಾಜ್ಯಾದ್ಯಂತ ಮಳೆ

ABOUT THE AUTHOR

...view details