ಕರ್ನಾಟಕ

karnataka

ETV Bharat / state

ಮತದಾನ ಮಾಡಿ ಬಂದ ಗ್ರಾಪಂ ಸದಸ್ಯನಿಗೆ ಹೃದಯಾಘಾತ: ಸಾವು - ಕಾರವಾರ ಟುಡೆ ನ್ಯೂಸ್

ವಿಧಾನಪರಿಷತ್​ ಚುನಾವಣೆಗೆ ಮತದಾನ ಮಾಡಿ ಮನೆಗೆ ಬಂದಿದ್ದ ಗ್ರಾಮ ಪಂಚಾಯತ್​ ಸದಸ್ಯ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

Gram panchayat members died by heart attack
ಹೃದಯಾಘಾತದಿಂದ ಗ್ರಾಪಂ ಸದಸ್ಯ ಸಾವು

By

Published : Dec 10, 2021, 8:17 PM IST

ಕಾರವಾರ: ಮತದಾನ ಮಾಡಿ ಬಂದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿ ಇಂದು ನಡೆದಿದೆ.

ಮುರ್ಕವಾಡದ ಲಕ್ಷ್ಮಣ ಶಿವಾರಾಯ ಮಾನೆ ( 60 ) ಮೃತ ದುರ್ದೈವಿ. ವಿಧಾನಪರಿಷತ್ ಚುನಾವಣೆ ಮತದಾನ ಮಾಡಿ ಬಂದಿದ್ದ ಲಕ್ಷ್ಮಣ ಅವರಿಗೆ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 314 ಮಂದಿಗೆ ಕೋವಿಡ್: ಇಬ್ಬರು ಸೋಂಕಿತರ ಸಾವು

ABOUT THE AUTHOR

...view details