ಕರ್ನಾಟಕ

karnataka

ETV Bharat / state

ಸರ್ಕಾರದಿಂದ ಕನ್ನಡ ಶಾಲೆ ಮುಚ್ಚುವ ಯತ್ನ ಎಂದ ರೋಹಿತ್ ಚಕ್ರತೀರ್ಥ - ರೋಹಿತ್ ಚಕ್ರತೀರ್ಥ

ಪದೇ ಪದೆ ಪಠ್ಯ‌ಪುಸ್ತಕ ಬದಲಾವಣೆ ಹಾಗೂ ಎನ್​ಇಪಿ ಜಾರಿ ಮಾಡುವದಿಲ್ಲವೆಂದು ಹೇಳುತ್ತಿರುವ ರಾಜ್ಯ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಜೊತೆಗೆ ಸಚಿವ ಸಂಪುಟ ಸಭೆಯಲ್ಲಿ ಪಠ್ಯ ಬದಲಾವಣೆಯ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Rohit Chakratheertha
ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

By ETV Bharat Karnataka Team

Published : Sep 28, 2023, 10:55 PM IST

Updated : Sep 29, 2023, 10:42 AM IST

ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ಶಿರಸಿ (ಉತ್ತರಕನ್ನಡ):ಪದೇ ಪದೆ ಪಠ್ಯ‌ ಬದಲಾವಣೆ ಜೊತೆಗೆ ರಾಷ್ಟ್ರೀಯ ಶಿಕ್ಷಣ‌ ನೀತಿ ವಿರೋಧಿಸುತ್ತಿರುವದನ್ನು ರಾಜ್ಯ ಸರ್ಕಾರ ಮಾಡುತ್ತಿರುವುದರಿಂದ ಕನ್ನಡ ಹಾಗೂ‌ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಆರೋಪಿಸಿದರು.

ಗುರುವಾರ‌ ಶಿರಸಿಯ ವಾದಿರಾಜ ಮಠದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪದೇ ಪದೆ ಪಠ್ಯಕ್ರಮ ಬದಲಾವಣೆ, ಎನ್​ಇಪಿ ಜಾರಿ ಮಾಡುವದಿಲ್ಲವೆಂದು ಹೇಳುವುದು ಪೋಷಕರಲ್ಲಿ ಗೊಂದಲವುಂಟಾಗುತ್ತಿದೆ. ಪೋಷಕರು ನಾಳೆ ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸೋಣ ಅಥವಾ ಬೇಡ ಎಂಬುವುದನ್ನು ಯೋಚನೆ ಮಾಡ್ತಾರೆ. ಈ ಗೊಂದಲದಿಂದ ಕನ್ನಡ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ನೇರವಾಗಿ ಕನ್ನಡ ಭಾಷೆಗೆ ದೊಡ್ಡ ಹೊಡೆತ ಬೀಳಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪಾಲನೆ ಮಾಡಲಿಲ್ಲವೆಂದರೆ ಶಿಕ್ಷಣದ ಗುಣಮಟ್ಟತೆ ಕಡಿಮೆ ಆಗುತ್ತದೆ. ಇದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ ಎಂದು ರೋಹಿತ್ ಚಕ್ರತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದಿನ ಪಠ್ಯ ಪುಸ್ತಕದಲ್ಲಿ ಏನು ಹಾಗೂ ಏಕೆ ಬದಲಾವಣೆ ಮಾಡಲಾಗಿದೆ ಎಂಬುದನ್ನು ನೂತನ ಸಮಿತಿ ರಚನೆಯೂ ಏನೂ ಹೇಳಿಲ್ಲ. ಸಚಿವರು, ಅಧಿಕಾರಿಗಳು ಯಾರೂ ಬದಲಾವಣೆ‌ ಕುರಿತು ನನ್ನನ್ನೂ ಈವರೆಗೂ ಕೇಳಿಲ್ಲ. ಯಾವ ಕಾರಣಕ್ಕಾಗಿ ಹಿಂದೆ ನಾವು ಬದಲಾವಣೆ ಮಾಡಿದ್ದೇವೆ ಎಂಬುದನ್ನು ಕೇಳಿಲ್ಲ. ಇದೊಂದು ಏಕಪಕ್ಷೀಯ ತೀರ್ಮಾನ. ಈ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದು, ಅದರ ಒಂದು ಭಾಗವಾಗಿ ಈ ಸಮಿತಿಗಳ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಸಚಿವ ಸಂಪುಟ ಸಭೆಯಲ್ಲಿ ಪಠ್ಯ ಬದಲಾವಣೆಯ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ. ಇದು ಮಕ್ಕಳ, ಪಾಲಕರಲ್ಲಿ ಗೊಂದಲವುಂಟು ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬರಗೂರು ರಾಮಚಂದ್ರಪ್ಪ ಸಮಿತಿ ರಚನೆ ಮಾಡಿದ ಪಠ್ಯ ಬದಲಾವಣೆ ಮಾಡುವಾಗ ನಾವು ಸಾರ್ವಜನಿಕವಾಗಿ ತಿಳಿಸಿದ್ದೆವು. ಆ ವೇಳೆ ಕಾರಣವನ್ನೂ ಹೇಳಿದ್ದೆವು. ಈವರೆಗೆ ನಾನು ನನ್ನ ಅಭಿಪ್ರಾಯ ಮಂಡಿಸಲು ಮುಕ್ತವಾಗಿದ್ದೇನೆ. ಪಠ್ಯ ಪುಸ್ತಕ ರಚನಾ ಸಮಿತಿ ಪರಿಷ್ಕರಣೆ ವಿಚಾರದಲ್ಲಿ ನಾಲ್ಕೈದು ಅಧ್ಯಕ್ಷರ ನೇಮಕಾತಿ ಆಗಿದೆ. ನಾನು ಹೇಳುವುದು ಏನೂ ಇಲ್ಲ. ಯಾವ ಕಾರಣಕ್ಕೆ ಮತ್ತು ಏಕೆ ಹೊಸ ಅಧ್ಯಾಯ ಸೇರಿಸ್ತಾ ಇದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂಓದಿ:ಪಂಚ ಗ್ಯಾರಂಟಿ, ಬರ ನಿರ್ವಹಣೆಯ ಹೊರೆ ಮಧ್ಯೆ ನಿರೀಕ್ಷಿತ ಗುರಿ ತಲುಪದ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ

Last Updated : Sep 29, 2023, 10:42 AM IST

ABOUT THE AUTHOR

...view details