ಕರ್ನಾಟಕ

karnataka

ETV Bharat / state

ಪೌಷ್ಠಿಕಾಂಶ ಕೊರತೆ ತಪ್ಪಿಸಲು ಸರ್ಕಾರ ಕ್ರಮ.. ಕಾರ್ಮಿಕರ ಕೈ ಸೇರುತ್ತಿದೆ ಲೀಟರ್ ಹಾಲು.. - karwar milk news

ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯ ಕಟ್ಟಡ ಹಾಗೂ ವಲಸೆ ಬಂದ ಕಾರ್ಮಿಕರಿದ್ದಾರೆ. ಇಂಥವರಿಗೆ ತೊಂದರೆ ಆಗುವುದನ್ನ ತಪ್ಪಿಸಲು ಉಚಿತ ಹಾಲು ವಿತರಣೆ ಮಾಡಲಾಗ್ತಿದೆ.

Govt Providing Milk
ಕಾರ್ಮಿಕರ ಕೈ ಸೇರುತ್ತಿದೆ ಲೀಟರ್ ಹಾಲು

By

Published : Apr 7, 2020, 12:38 PM IST

ಕಾರವಾರ:ಲಾಕ್​ಡೌನ್ ಹಿನ್ನೆಲೆ ಕಾರ್ಮಿಕರಿಗೆ ಹಾಗೂ ಬಡ ಜನರಿಗೆ ಸರ್ಕಾರ ಉಚಿತವಾಗಿ ನೀಡುತ್ತಿರುವ ಒಂದು ಲೀಟರ್ ಹಾಲನ್ನು ನಗರದಲ್ಲಿಂದು ಕಾರ್ಮಿಕ ಇಲಾಖೆ ಸಿಬ್ಬಂದಿ ವಿತರಣೆ ಮಾಡಿದರು.

ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ಸರಿಯಾದ ಆಹಾರವಿಲ್ಲದೆ ಪೌಷ್ಠಿಕಾಂಶದ ಕೊರತೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಒಂದು ಲೀಟರ್ ಹಾಲು ವಿತರಸುತ್ತಿದೆ. ಅದೇ ರೀತಿ ಕಾರವಾರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 99ರ‌ ಅಗಲೀಕರಣ ಕಾಮಗಾರಿ ಸ್ಥಗಿತಗೊಂಡು ನಗರದ ಸಂಕ್ರುಭಾಗದ ಬಳಿ ನೆಲೆಸಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಒಂದು ಲೀಟರ್‌ನಂತೆ ವಿತರಣೆ ಮಾಡಲಾಯಿತು.

ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಕಟ್ಟಡ ಹಾಗೂ ವಲಸೆ ಬಂದ ಕಾರ್ಮಿಕರಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಇಂತವರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ, ನಗರಸಭೆ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆ ಮೂಲಕ ಸುಮಾರು 2,500 ಲೀ. ಉಚಿತ ಹಾಲನ್ನು ವಿತರಿಸಲಾಗುತ್ತಿದೆ.

ABOUT THE AUTHOR

...view details