ಭಟ್ಕಳ: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರುಕುಟುಂಬಸ್ಥರೊಂದಿಗೆ ಧಾರ್ಮಿಕ ಸ್ಥಳಗಳ ಪ್ರವಾಸದಲ್ಲಿದ್ದಾರೆ. ಇಂದು 11.15ರ ವೇಳೆಗೆ ಝಡ್ ಪ್ಲಸ್ ಭದ್ರತೆಯೊಂದಿಗೆ ಅವರು ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
police alert in murudeshwara :ಮುರುಡೇಶ್ವರ ದೇವಸ್ಥಾನದಿಂದ ಮಹಾದ್ವಾರದ ತನಕ ಎರಡೂ ರಸ್ತೆ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಎಲ್ಲ ಕಡೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ರಸ್ತೆಯುದ್ದಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಎಲ್ಲ ಒಳ ಸಂಪರ್ಕ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಲಾಗಿದೆ. ಸತತ ಒಂದು ಗಂಟೆಗಳ ಕಾಲ ಪ್ರವಾಸಿಗರಿಗೆ ಸಂಚಾರ ಸಿಗದ ಹಿನ್ನೆಲೆ ಅಸಮಾಧಾನಗೊಂಡರು.
ರಾಜ್ಯಪಾಲ ಗೆಹ್ಲೋಟ್ ಕುಟುಂಬಸ್ಥರಿಂದ ಪೂಜೆ :ಮಾತ್ಹೋಬಾರ ಶ್ರೀ ದೇವರಿಗೆ ರಾಜ್ಯಪಾಲರು ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು. ಕೆಲ ಕಾಲ ದೇವಸ್ಥಾನದ ಒಳಗೆ ಕುಳಿತು ವಿಶ್ರಾಂತಿ ಪಡೆಯಲು ವಿಶೇಷ ಆಸನದ ವ್ಯವಸ್ಥೆ ಮಾಡಿದ್ದರು. ದೇವರ ಪೊಜೆ ಬಳಿಕ ಮುರುಡೇಶ್ವರಕ್ಕೆ ಗಣ್ಯರು ಭೇಟಿ ನೀಡುವ ವೇಳೆ ದೇವಸ್ಥಾನದಲ್ಲಿ ದಾಖಲಿಸುವ ಗಣ್ಯರ ಭೇಟಿ ಪುಸ್ತಕಕ್ಕೆ ಸಹಿ ಹಾಕಿದರು.