ಕಾರವಾರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಅಂಗವಾಗಿ 150 ಮಿಲಿ ಗ್ರಾಂ ಚಿನ್ನದಲ್ಲಿ ಚರಕದ ಮಾದರಿ ಹಾಗೂ 20 ಮಿಲಿ ಗ್ರಾಂ ತೂಕದ ಚಿನ್ನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಸಿದ್ಧಪಡಿಸಿ ಹವ್ಯಾಸಿ ಅಕ್ಕಸಾಲಿಗರೊಬ್ಬರು ಗಮನ ಸೆಳೆದಿದ್ದಾರೆ.
ಹೊನ್ನಾವರದ ಹವ್ಯಾಸಿ ಅಕ್ಕಸಾಲಿಗನ ಕೈಚಳಕದಲ್ಲಿ ಮೂಡಿದ ಚಿನ್ನದ ಚರಕ ಮತ್ತು ಗಾಂಧೀಜಿ ಪ್ರತಿಮೆ! - ಇಂಡಿಯಾ ಬುಕ್ ಆಫ್ ರೆಕಾರ್ಡ್
ಹೊನ್ನಾವರದ ಎಸ್ಡಿಎಂ ಕಾಲೇಜಿನ ಉಪನ್ಯಾಸಕರೂ ಆಗಿರುವ ಹವ್ಯಾಸಿ ಅಕ್ಕಸಾಲಿಗ ಪ್ರಸನ್ನ ಚಂದ್ರಕಾಂತ ಶೇಟ್ ಎಂಬುವರು ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಅವರು ಬಟ್ಟೆ ನೆಯಲು ಬಳಸುತ್ತಿದ್ದ ಚರಕವನ್ನು ಚಿನ್ನದಲ್ಲಿ ರಚಿಸಿದ್ದಾರೆ.

ಚಿನ್ನದ ಚರಕ ಮತ್ತು ಗಾಂಧೀಜಿ ಪ್ರತಿಮೆ
ಗಾಂಧೀಜಿ ಬಟ್ಟೆ ನೆಯಲು ಬಳಸುತ್ತಿದ್ದ ಚಿನ್ನದ ಚರಕ
ಹೊನ್ನಾವರದ ಎಸ್ಡಿಎಂ ಕಾಲೇಜಿನ ಉಪನ್ಯಾಸಕರೂ ಆಗಿರುವ ಹವ್ಯಾಸಿ ಅಕ್ಕಸಾಲಿಗ ಪ್ರಸನ್ನ ಚಂದ್ರಕಾಂತ ಶೇಟ್, ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಅವರು ಬಟ್ಟೆ ನೆಯಲು ಬಳಸುತ್ತಿದ್ದ ಚರಕ ರಚಿಸಿದ್ದಾರೆ. ಚರಕ 8 ಮಿ.ಮೀ. ಅಗಲ ಹಾಗೂ 5 ಮಿ.ಮೀ. ಎತ್ತರವಿದ್ದು, ಗಾಂಧೀಜಿಯವರ ಪ್ರತಿಕೃತಿ 1 ಸೆಂ.ಮೀ ಎತ್ತರವಿದೆ.
ಈ ಹಿಂದೆ ಇವರು ರಚಿಸಿದ 53 ಮಿಲಿ ಗ್ರಾಂ ಚಿನ್ನದ ಅಮರ್ ಜವಾನ ಜ್ಯೋತಿ ಮಾದರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಇದೀಗ ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಚರಕದ ಮಾದರಿ ತಯಾರಿಸಿದ್ದು ಎಲ್ಲರ ಗಮನ ಸೆಳೆದಿದೆ.