ಭಟ್ಕಳ (ಉತ್ತರ ಕನ್ನಡ):ಮಳೆಯಿಂದಾಗಿ ಮೀನುಗಾರರು ಕಡಲಿಗೆ ಇಳಿಯದೆ, ತಮ್ಮ ಬೋಟುಗಳನ್ನ ಬಂದರುಗಳಲ್ಲೇ ಲಂಗರು ಹಾಕಿ ಮಳೆ-ಗಾಳಿ ಕಡಿಮೆಯಾಗುವುದನ್ನ ಕಾದು ಕುಳಿತಿದ್ದಾರೆ. ಈ ನಡುವೆ ಭಟ್ಕಳ ತಾಲೂಕಿನ ಮುರುಡೇಶ್ವರ, ಮಾವಿನಕುರ್ವಾ ಬಂದರು ಸೇರಿದಂತೆ ವಿವಿಧೆಡೆ ಗೊಬ್ರ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿವೆ.
ಭಟ್ಕಳ ಕಡಲತೀರಕ್ಕೆ ಬರುತ್ತಿವೆ ರಾಶಿ ರಾಶಿ ಗೊಬ್ರ ಮೀನುಗಳು - ಗೊಬ್ರ
ಗಾಳಿ, ಮಳೆಯಿಂದಾಗಿ ಬೋಟುಗಳು ಮೀನುಗಾರಿಕೆಗೆ ಇಳಿಯದೆ ಬಂದರುಗಳಲ್ಲಿಯೇ ಇವೆ. ಹೀಗಿರುವಾಗ ಭಟ್ಕಳ ಭಾಗದ ಕಡಲತೀರಗಳಲ್ಲಿ ರಾಶಿ ರಾಶಿ ಗೊಬ್ರ ಮೀನು ದೊರೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಶಿ ರಾಶಿ ಗೊಬ್ರ ಮೀನುಗಳು
ಸಣ್ಣ ಮರಿ ಮೀನುಗಳು ಇವಾಗಿದ್ದು, ಈ ಭಾಗದಲ್ಲಿ ಮುರಿಯ ಅಂತಲೂ ಇದಕ್ಕೆ ಕರೆಯುತ್ತಾರೆ. ಈ ಮೀನುಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತಿರುತ್ತವೆ. ಆದರೆ ಈ ರೀತಿ ದಡಕ್ಕೆ ಬಂದು ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೀನುಗಳನ್ನು ಹಿಡಿಯಲು ಕಡಲತೀರದಲ್ಲಿ ಜನರ ದಂಡೇ ನೆರೆದಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್