ಕಾರವಾರ (ಉತ್ತರಕನ್ನಡ):ಮೀನಿನ ಲಾರಿಯಲ್ಲಿ 9 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ ಲಾರಿ ಸಹಿತ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಮೀನಿನ ಲಾರಿಯಲ್ಲಿ 9 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಣೆ: ವ್ಯಕ್ತಿ ಬಂಧನ - ಕಾರವಾರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ
ಇಂದು ಬೆಳಗ್ಗೆ ಕಾರವಾರದಲ್ಲಿ ಅಬಕಾರಿ ಅಧಿಕಾರಿಗಳು ಗೋವಾದಿಂದ ಆಗಮಿಸಿದ ಮೀನಿನ ಲಾರಿಯನ್ನು ತಪಾಸಣೆ ನಡೆಸಿದ್ದರು. ಈ ವೇಳೆ ಕ್ರೇಟ್ಗಳ ಮಧ್ಯೆ ಅಂದಾಜು 9.13 ಲಕ್ಷ ರೂ. ಮೌಲ್ಯದ ಸುಮಾರು 505 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ
ಇಂದು ಬೆಳಗ್ಗೆ ಕಾರವಾರದ ಮಾಜಾಳಿ ಗೇಟ್ ಬಳಿ ಅಬಕಾರಿ ಅಧಿಕಾರಿಗಳು, ಗೋವಾದಿಂದ ಆಗಮಿಸಿದ ಮೀನಿನ ಲಾರಿಯಲ್ಲಿ 300 ಕ್ಕೂ ಹೆಚ್ಚು ಖಾಲಿ ಕ್ರೇಟ್ಗಳು ಇರುವುದನ್ನು ಕಂಡು ಅನುಮಾನಗೊಂಡ ತಪಾಸಣೆ ನಡೆಸಿದ್ದರು. ಈ ವೇಳೆ ಕ್ರೇಟ್ಗಳ ಮಧ್ಯೆ ಅಂದಾಜು 9.13 ಲಕ್ಷ ರೂ. ಮೌಲ್ಯದ ಸುಮಾರು 505 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಚಾಲಕ ಆಂಧ್ರ ಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಸಾಗಣೆಗೆ ಬಳಸಿದ್ದ 10 ಚಕ್ರದ 16 ಲಕ್ಷ ರೂ. ಮೌಲ್ಯದ ಕಂಟೇನರ್ ಲಾರಿ, 90 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ಕ್ರೇಟ್ ಸೇರಿ 25 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.