ಕಾರವಾರ: ಸರ್ಕಾರ ಕೋವಿಡ್ ತಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಜಿಲ್ಲೆ ಹಾಗೂ ಅಂತಾರಾಜ್ಯ ಗಡಿ ಬಂದ್ ಮಾಡಿದೆ. ಇದರಿಂದ ಕರ್ನಾಟಕ ಗೋವಾ ಗಡಿ ಭಾಗವಾದ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಿದ್ದು, ಅನಗತ್ಯ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.
ಗೋವಾ - ಕರ್ನಾಟಕ ಬಾರ್ಡರ್ ಸಂಪೂರ್ಣ ಬಂದ್ - ಕಾರವಾರ
ಕೊರೊನಾ ಅಬ್ಬರ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕರ್ಪ್ಯೂ ಬದಲಾಗಿ ಜಿಲ್ಲೆ ಹಾಗೂ ಅಂತಾರಾಜ್ಯ ಓಡಾಟ ತಡೆಯುವಂತಹ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿ ಸರ್ಕಾರ ಮೇ 24ರವರೆಗೆ ಲಾಕ್ಡೌನ್ ಘೋಷಿಸಿದೆ.
ಕೊರೊನಾ ಅಬ್ಬರ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕರ್ಪ್ಯೂ ಬದಲಾಗಿ ಜಿಲ್ಲೆ ಹಾಗೂ ಅಂತಾರಾಜ್ಯ ಓಡಾಟ ತಡೆಯುವಂತಹ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿ ಸರ್ಕಾರ ಮೇ 24ರವರೆಗೆ ಲಾಕ್ಡೌನ್ ಘೋಷಿಸಿದೆ. ಅದರಂತೆ ಗಡಿ ಜಿಲ್ಲೆ ಉತ್ತರ ಕನ್ನಡದ ಕಾರವಾರ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಗೋವಾದಿಂದ ಆಗಮಿಸುವ ಇಲ್ಲವೇ ಕರ್ನಾಟಕದಿಂದ ತೆರಳುವ ಅಗತ್ಯ ಸೇವೆ, ಆಸ್ಪತ್ರೆಗೆ ತೆರಳುವವರು, ತುರ್ತು ಸೇವೆ ಹೊರತಾಗಿ ಯಾರಿಗೂ ಕೂಡ ಓಡಾಟಕ್ಕೆ ಅವಕಾಶ ನೀಡದೇ ಸಂಪೂರ್ಣ ಬಂದ್ ಮಾಡಲಾಗಿದೆ.
ಈವರೆಗೆ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಬಿಡಲಾಗುತಿತ್ತು. ಆದರೆ ಸರ್ಕಾರ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೇ ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಿದ್ದು ಅನಾವಶ್ಯಕವಾಗಿ ಓಡಾಡುವವರಿಗೆ ಮತ್ತು ಕಾರಣವಿಲ್ಲದೆ ರಾಜ್ಯ ಪ್ರವೇಶಿಸಲು ಮುಂದಾದವರನ್ನು ತಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ.