ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಪರೀಕ್ಷೆಗೆ ಗೈರು: ಮನನೊಂದು ಯುವತಿ ಆತ್ಯಹತ್ಯೆ - ಅನಾರೋಗ್ಯದಿಂದ ಬೇಸತ್ತ ಯುವತಿ ಆತ್ಮಹತ್ಯೆ

ಅನಾರೋಗ್ಯದಿಂದ ಪರೀಕ್ಷೆಗೆ ಗೈರಾಗಿದ್ದರಿಂದ ನಾಗಶ್ರೀ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಭಟ್ಕಳ ತಾಲೂಕಿನ ವೆಂಕಟಾಪುರದ ಕೆ.ಹೆಚ್.ಪಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

girl suicide due to  illness in bhatkal
ಬಿ.ಎಂ. ನಾಗಶ್ರೀ ನಾಯ್ಕ

By

Published : Dec 27, 2019, 9:21 PM IST

ಭಟ್ಕಳ: ಅನಾರೋಗ್ಯದಿಂದ ಪರೀಕ್ಷೆಗೆ ಹಾಜರಾಗಲು ಆಗದೆ ಇರುವ ಕಾರಣ ಯುವತಿಯೋರ್ವಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅನಾರೋಗ್ಯದಿಂದ ಬೇಸತ್ತ ಯುವತಿ ಆತ್ಮಹತ್ಯೆ

ತಾಲೂಕಿನ ವೆಂಕಟಾಪುರದ ಕೆ.ಹೆಚ್.ಪಿ ಕಾಲೋನಿ ನಿವಾಸಿ ಬಿ.ಎಂ.ನಾಗಶ್ರೀ ನಾಯ್ಕ (19) ಆತ್ಮಹತ್ಯೆ ಮಾಡಿಕೊಂಡ ಯುವತಿ ಎನ್ನಲಾಗಿದೆ.

ಮೂಡಬಿದರೆಯ ಖಾಸಗಿ ಕಾಲೇಜಿನಲ್ಲಿ ನಾಗಶ್ರೀ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಲೇಜಿನರ‍್ಯಾಂಕ್​ ವಿದ್ಯಾರ್ಥಿನಿಯಾಗಿದ್ದರು. ಪರೀಕ್ಷೆ ರಜೆಗಾಗಿ ಮನೆಗೆ ಬಂದಿದ್ದಾಗ ತೀವ್ರ ಜ್ವರದಿಂದ ಬಳಲಿದ್ದಾರೆ. ಇದರಿಂದ ಪರೀಕ್ಷೆಗೆ ಗೈರಾಗಿದ್ದರು.

ಬಾವಿಗೆ ಬಿದ್ದ ವೇಳೆ ಯುವತಿಯ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಯುವತಿಯ ತಂದೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details