ಕರ್ನಾಟಕ

karnataka

ETV Bharat / state

ಗ್ಯಾಸ್‌ ಟ್ಯಾಂಕರ್‌ನಲ್ಲಿ ಚಾಲಕನ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ - Bhatkala suicide news

ಭಟ್ಕಳ ತಾಲೂಕಿನ ವೆಂಕಟಾಪುರ ಪೆಟ್ರೋಲ್ ಪಂಪ್ ಮುಂದಿನ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ನಿಲ್ಲಿಸಿದ್ದು ಟ್ಯಾಂಕರಿನೊಳಗೆ​ ಚಾಲಕನ ಮೃತದೇಹ ಪತ್ತೆಯಾಗಿದೆ.

ನಿಂತ ವಾಹನದೊಳಗೆ ಗ್ಯಾಸ್ ಟ್ಯಾಂಕರ್ ಚಾಲಕ ಆತ್ಮಹತ್ಯೆ

By

Published : Sep 27, 2019, 11:04 AM IST

ಭಟ್ಕಳ:ತಾಲೂಕಿನ ವೆಂಕಟಾಪುರ ಪೆಟ್ರೋಲ್ ಪಂಪ್ ಮುಂದಿನ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್‌ ಟ್ಯಾಂಕರಿನೊಳಗೆ ಚಾಲಕನ ಮೃತದೇಹ ಪತ್ತೆಯಾಗಿದೆ.

ನಿಂತ ವಾಹನದೊಳಗೆ ಗ್ಯಾಸ್ ಟ್ಯಾಂಕರ್ ಚಾಲಕ ಆತ್ಮಹತ್ಯೆ

ಮೃತ ವ್ಯಕ್ತಿಯನ್ನು ವಾಸು ಕರಿಯಪ್ಪ ನಾಯ್ಕ (30) ಎಂದು ಗುರುತಿಸಲಾಗಿದೆ.ಈತ ಭಟ್ಕಳ ತಾಲೂಕಿನ ತೆಂಗಿನಗುಂಡಿ ನಿವಾಸಿ ಎಂದು ತಿಳಿದುಬಂದಿದೆ.

ನಿನ್ನೆ ಮನೆಗೆ ಬಂದವನು ಮತ್ತೆ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾನೆ. ಬೆಳಿಗ್ಗೆಯಿಂದ ಸಂಜೆಯ ತನಕ ಗ್ಯಾಸ್ ಟ್ಯಾಂಕರ್ ರಸ್ತೆ ಪಕ್ಕದಲ್ಲೇ ನಿಂತಿತ್ತು. ಚಾಲಕನ ಎದುರಿನ ಗ್ಲಾಸಿಗೆ ಬಟ್ಟೆ ಹಾಕಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಗ್ಯಾಸ್ ಟ್ಯಾಂಕರ್ ಹತ್ತಿರ ಬಂದಿದ್ದು ನೋಡಿದ್ದಾರೆ. ಈ ವೇಳೆ ಚಾಲಕ ಮೃತದೇಹ ಗಮನಿಸಿದ್ದು, ಕೂಡಲೇ ಗ್ರಾಮೀಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಗ್ರಾಮೀಣ ಠಾಣಾ ಪೊಲೀಸರಿಗೆ ಮೃತ ವ್ಯಕ್ತಿಯ ಪಕ್ಕದಲ್ಲಿ ವಿಷದ ಬಾಟಲಿ ದೊರೆತಿದ್ದು ಪರಿಶೀಲನೆಗೆ ಕಳುಹಿಸಿದ್ದಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details