ಶಿರಸಿ:ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ದಾಂಡೇಲಿ ನಗರದ ಡಿಎಫ್ಎ ಮೈದಾನದಲ್ಲಿ ನಡೆದಿದೆ.
ಶಿರಸಿ: ಮಾಲು ಸಮೇತ ನಾಲ್ವರು ಗಾಂಜಾ ಮಾರಾಟಗಾರರ ಬಂಧನ - ಅಕ್ರಮವಾಗಿ ಗಾಂಜಾ ಮಾರಟ
ಶಿರಸಿಯಲ್ಲಿ ಗಾಂಜಾ ಮಾರಟದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
![ಶಿರಸಿ: ಮಾಲು ಸಮೇತ ನಾಲ್ವರು ಗಾಂಜಾ ಮಾರಾಟಗಾರರ ಬಂಧನ ಗಾಂಜಾ ಮಾರಾಟಗಾರ](https://etvbharatimages.akamaized.net/etvbharat/prod-images/768-512-6158945-thumbnail-3x2-ugyg.jpg)
ಗಾಂಜಾ ಮಾರಾಟಗಾರ
ದಾಂಡೇಲಿಯ ಪಟೇಲನಗರದ ನಿವಾಸಿ ಹುಸೇನಸಾಬ ಅಲಿಯಾಸ್ ಇಮ್ರಾನ್ ಹಸನಸಾಬ ಶೇಖ (24), ಮಾರುತಿ ನಗರದ ನಿವಾಸಿ ಅಶೋಕ ದೇಮಣ್ಣಾ ಗುರುವ (22), ಲಮಾಣಿಚಾಳದ ನಿವಾಸಿ ಅಬ್ದುಲ್ಲಾ ಖಾದರ ಖಾನ್ ಪಠಾಣ (18) ಮತ್ತು ಹಳೆದಾಂಡೇಳಿಯ ಮಹಮ್ಮದ ಗೌಸ ಅಲಿಯಾಸ್ ಅಶೀಪ್ ಅಬ್ದುಲ ಕುಟ್ಟಿ ( 24) ಬಂಧಿತ ಆರೋಪಿಗಳು.
ದಾಳಿ ವೇಳೆ ಅಂದಾಜು 10 ಸಾವಿರ ರೂ. ಮೌಲ್ಯದ 672 ಗ್ರಾಂ ಗಾಂಜಾ, 1,70,000 ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, 5 ಸಾವಿರ ಮೌಲ್ಯದ ಮೊಬೈಲ್ ಹಾಗೂ 550 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.