ಶಿರಸಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾದ ಗಾಂಧಿ ಸಂಕಲ್ಪ ಪಾದಯಾತ್ರೆ ಶನಿವಾರ ಸಂಜೆ ಶಿರಸಿಗೆ ಆಗಮಿಸಿದ್ದು, ನಗರದ ನಿಲೇಕಣಿ ಬಳಿ ಭವ್ಯ ಸ್ವಾಗತ ನೀಡಲಾಯಿತು.
ಶಿರಸಿಯಲ್ಲಿ ಬಿಜೆಪಿ ವತಿಯಿಂದ ಗಾಂಧಿ ಸಂಕಲ್ಪ ಪಾದಯಾತ್ರೆ: ಗಮನ ಸೆಳೆದ ಗಾಂಧೀಜಿ ಪಾತ್ರದಾರಿ - ಶಿರಸಿಯಲ್ಲಿ ಗಾಂಧಿ ಸಂಕಲ್ಪ ಪಾದಯಾತ್ರೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜಯಂತಿ ಅಂಗವಾಗಿ ಶಿರಸಿಯಲ್ಲಿ ಗಾಂಧಿ ಸಂಕಲ್ಪ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನಿಲೇಕಣಿಯಿಂದ ಹೊರಟ ಸಂಕಲ್ಪ ಪಾದಯಾತ್ರೆಯು ರಾಯರಪೇಟೆ, ಶ್ರದ್ಧಾನಂದ ಗಲ್ಲಿ ಮತ್ತಿತರ ಕಡೆ ಸಂಚರಿಸಿ ಬಿಡ್ಕಿಬೈಲ್ ತಲುಪಿದ್ದು, ಅಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾರಿಕಾಂಬಾ ದೇವಾಲಯ ತಲುಪಿತು. ಪಾದಯಾತ್ರೆಗೆ ಗಾಂಧೀಜಿ ಪಾತ್ರದಾರಿ ಮೆರಗು ನೀಡಿದರು.
ಸಂಕಲ್ಪ ಪಾದಯಾತ್ರೆಯಲ್ಲಿ ಗಾಂಧೀಜಿ ಹಾಗೂ ಭಾರತ ಮಾತೆಗೆ ಜಯಘೋಷ ಕೂಗಲಾಯಿತು. 'ಮಹಾತ್ಮ ಗಾಂಧೀಜಿಯವರ ಕನಸನ್ನು ನಾವು ನನಸು ಮಾಡುತ್ತೇವೆ. ರಾಮರಾಜ್ಯವನ್ನು ನಿರ್ಮಾಣ ಮಾಡುತ್ತೇವೆ' ಎಂದು ಬಿಜೆಪಿಗರು ನುಡಿದರು. ಎರಡು ದಿನಗಳ ಕಾಲ ಶಿರಸಿಯಲ್ಲಿ ಸಂಕಲ್ಪ ಪಾದಯಾತ್ರೆ ಸಂಚರಿಸಲಿದ್ದು, ನಂತರ ಯಲ್ಲಾಪುರಕ್ಕೆ ತಲುಪಲಿದೆ.