ಶಿರಸಿ : ಕೊರೊನಾ ನಿಯಂತ್ರಣಕ್ಕೆ ಹೇರಲಾಗಿರುವ ಭಾನುವಾರದ ಲಾಕ್‌ಡೌನ್ ಗೆ ಶಿರಸಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
ಸಂಡೇ ಲಾಕ್‌ಡೌನ್ ಗೆ ಶಿರಸಿಯಲ್ಲಿ ಸಂಪೂರ್ಣ ಬೆಂಬಲ - ಶಿರಸಿ ಭಾನುವಾರದ ಲಾಕ್‌ಡೌನ್ ನ್ಯೂಸ್
ಭಾನುವಾರದ ಲಾಕ್‌ಡೌನ್ ಗೆ ಶಿರಸಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

Sirsi
ಶನಿವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆ ಇಂದು ಸಹ ಮುಂದುವರೆದಿದ್ದು, ಜನರು ಮನೆಯಲ್ಲೇ ಇರುವಂತೆ ಮಾಡಿದೆ. ನಗರದ ಹಳೆ ಬಸ್ ನಿಲ್ದಾಣ ವೃತ್ತ, ಅಶ್ವಿನಿ ಸರ್ಕಲ್, ಶಿವಾಜಿ ಚೌಕ, ಯಲ್ಲಾಪುರ ನಾಕಾ ಸೇರಿದಂತೆ ಪ್ರಮುಖ ವೃತ್ತಗಳು ಖಾಲಿ ಹೊಡೆಯುತ್ತಿದೆ.
ತರಕಾರಿ, ಮಾಂಸದ ಅಂಗಡಿಗಳು ಸೇರಿದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು, ಅಲ್ಲಲ್ಲಿ ಮೆಡಿಕಲ್ ಶಾಪ್ ಗಳು ಮಾತ್ರ ತೆರೆದುಕೊಂಡಿವೆ. ಲಾಕ್‌ಡೌನ್ ಹಿನ್ನೆಲೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.