ಕರ್ನಾಟಕ

karnataka

ETV Bharat / state

'ನೀರಜ್' ಹೆಸರಿನವರಿಗೆ ಭರ್ಜರಿ ಆಫರ್​: ಭಟ್ಕಳದ ರೆಸ್ಟೋರೆಂಟ್​ನಲ್ಲಿ ಆ. 15ರವರೆಗೆ ಫ್ರೀ ಊಟ! - Neeraj Chopra,

ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ​ ಚಿನ್ನದ ಪದಕ ಗೆದ್ದ ಸಂತೋಷಕ್ಕಾಗಿ ಭಟ್ಕಳದ ತಾಮ್ರ ಹೋಟೆಲ್​ 'ನೀರಜ್​' ಹೆಸರಿನವರಿಗೆ ಉಚಿತವಾಗಿಯೇ ಫುಲ್​ ಮೀಲ್ಸ್​ ನೀಡುತ್ತಿದೆ. ಈ ಮೂಲಕ ಬಂಗಾರದ ಹುಡುಗ ನೀರಜ್​ಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಲು ಮುಂದಾಗಿದೆ.

neeraj
'ನೀರಜ್' ಹೆಸರಿನವರಿಗೆ ಬಂಪರ್​ ಕೊಡುಗೆ

By

Published : Aug 9, 2021, 7:34 PM IST

Updated : Aug 9, 2021, 7:58 PM IST

ಭಟ್ಕಳ/ಉತ್ತರ ಕನ್ನಡ: ಜಿಲ್ಲೆಯ ಭಟ್ಕಳದ ವೆಂಕ್ಟಾಪುರ ಬ್ರಿಡ್ಜ್ ಪಕ್ಕದಲ್ಲಿರುವ ಶಿರಾಲಿಯ ನೀರಕಂಠ ಸಮೀಪದ 'ತಾಮ್ರ' ರೆಸ್ಟೋರೆಂಟ್​ ವಿಶೇಷ ಆಫರ್​ ಮೂಲಕ ಸುದ್ದಿಯಾಗಿದೆ. ನೀರಜ್ ಎಂಬ ಹೆಸರಿನವರಿಗೆ ಉಚಿತವಾಗಿ ಊಟ ನೀಡುವುದಾಗಿ ಘೋಷಿಸಿದೆ.

ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟ ಜಾವೆಲಿನ್​ ಪಟು ನೀರಜ್ ಚೋಪ್ರಾಗೆ ತಾಮ್ರ ರೆಸ್ಟೋರೆಂಟ್​ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತಿದೆ.

'ನೀರಜ್' ಹೆಸರಿನವರಿಗೆ ಬಂಪರ್​ ಕೊಡುಗೆ

ನೀರಜ್ ಎಂಬ ಹೆಸರಿನವರಿಗೆ ಅನ್ ಲಿಮಿಟೆಡ್ ಊಟವನ್ನು ಇಲ್ಲಿ ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ 15ರವರೆಗೂ ಇದ್ದು, ಈ ಬಗ್ಗೆ ಈಗಾಗಲೇ ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ 'ತಾಮ್ರ' ರೆಸ್ಟೋರೆಂಟ್ ಘೋಷಿಸಿದೆ.

ಈ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ 'ತಾಮ್ರ‌' ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್​ನಲ್ಲಿ ಉಚಿತವಾಗಿ ಅವರಿಗೆ ಬೇಕಾದ ಅಥವಾ ನಮ್ಮಲ್ಲಿ‌ ಲಭ್ಯವಿರುವ ಊಟ ನೀಡಲಾಗುತ್ತದೆ. ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್ಸ್ಟಾಗ್ರಾಂ, ಫೇಸ್​ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಿದರೆ ಸಾಕು, ಅವರು ಈ‌ ಕೊಡುಗೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಇಲ್ಲಿಯ ತನಕ ತಾಲೂಕಿನ ನಾಲ್ಕು ಮಂದಿ ರೆಸ್ಟೋರೆಂಟ್​ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿದ್ದು ಓರ್ವ ನೀರಜ್ ಆಚಾರಿ ಎನ್ನುವವರು ಇಂದು(ಸೋಮವಾರ) ರಾತ್ರಿ ತಾಮ್ರ ರೆಸ್ಟೋರೆಂಟ್​ನಲ್ಲಿ ಫ್ರೀ ಫುಲ್ ಮಿಲ್ಸ್ ಸವಿಯಲು ಸಿದ್ಧರಾಗಿದ್ದಾರೆ.

ಕಳೆದ ಏಳು ತಿಂಗಳ ಹಿಂದೆ ಆರಂಭಗೊಂಡ 'ತಾಮ್ರ' ರೆಸ್ಟೋರೆಂಟ್​ ಸಾಂಪ್ರದಾಯಿಕ ಶೈಲಿಯ, ಸಮುದ್ರಾಹಾರಗಳಿಗೆ ಪ್ರಸಿದ್ಧಿ ಪಡೆಯುತ್ತಿದೆ. ತಾಮ್ರದಲ್ಲಿ ಊಟ ಮಾಡಿದವರು ಇನ್ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ಪೇಜ್ ಅನ್ನು ಟ್ಯಾಗ್ ಮಾಡಿದರೆ ಶೇ. 10ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿತ್ತು.

'ನೀರಜ್' ಹೆಸರಿನವರಿಗೆ ಉಚಿತ ಊಟ

ತಾಮ್ರ ರೆಸ್ಟೋರೆಂಟ್ ಶಿರಾಲಿಯ ನೀರಕಂಠ ಕ್ರಾಸ್​ನಲ್ಲಿದ್ದು, ಹೆದ್ದಾರಿಗೆ ಸಮೀಪದಲ್ಲಿದೆ. 60 ಆಸನಗಳ ವ್ಯವಸ್ಥೆ ಇದೆ. 30 ಆಸನಗಳ ಎಸಿ ಹಾಗೂ ಎರಡು ಫ್ಯಾಮಿಲಿ ರೂಮ್​ಗಳಿವೆ. ಉತ್ತಮ ಪರಿಸರ, ವೈವಿಧ್ಯಮಯ ಬೆಳಕಿನ ನಡುವೆ ಇಲ್ಲಿ ಊಟ ಸವಿಯುವುದೇ ವಿಶಿಷ್ಟ ಅನುಭವ. ಈ ರೆಸ್ಟೋರೆಂಟ್ ಮಾಲೀಕ ಆಶೀಶ್​ ನಾಯಕ್​ ಕಾರವಾರ ಮೂಲದವರಾಗಿದ್ದು, ಗೋವಾದಲ್ಲಿ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ತಾಮ್ರ ರೆಸ್ಟೋರೆಂಟ್ ಅನ್ನು ಕೂಡ ನಡೆಸುತ್ತಿದ್ದಾರೆ.

Last Updated : Aug 9, 2021, 7:58 PM IST

ABOUT THE AUTHOR

...view details