ಕಾರವಾರ: ಕಾರ್ಗಿಲ್ ವಿಜಯ ದಿವಸದ ಸವಿ ನೆನಪಿಗಾಗಿ ಕಾರವಾರದ ಕದಂಬ ನೌಕಾನೆಲೆ ವೀಕ್ಷಣೆಗೆ ನಾಳೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಐಎನ್ಎಸ್ ವಿಕ್ರಮಾದಿತ್ಯ ಯುದ್ದ ನೌಕೆ ನೋಡುವ ಸದಾವಕಾಶ ಎಲ್ಲರಿಗೂ ಲಭ್ಯವಾಗಿದೆ.
ಕಾರ್ಗಿಲ್ ವಿಜಯದ ನೆನಪಿಗಾಗಿ ನಾಳೆ ಕದಂಬ ನೌಕಾನೆಲೆ ವೀಕ್ಷಣೆಗೆ ಮುಕ್ತ ಪ್ರವೇಶ - undefined
ಕಾರ್ಗಿಲ್ ವಿಜಯದ ಸವಿ ನೆನಪಿನ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11ರಿಂದ ಸಂಜೆ 5 ರವರೆಗೆ ಸಾರ್ವಜನಿಕರು ಮತ್ತು 5 ನೇ ತರಗತಿ ಮೇಲ್ಪಟ್ಟ ಶಾಲಾ ವಿದ್ಯಾರ್ಥಿಗಳು ಕಾರವಾರದ ಕದಂಬ ನೌಕಾನೆಲೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದು, ಪ್ರತಿಷ್ಠಿತ ಯುದ್ದ ವಾಹಕ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ಸುವರ್ಣ ನೌಕೆಗಳ ವೀಕ್ಷಣೆ ಮಾಡಬಹುದಾಗಿದೆ.
ನಾಳೆ ಬೆಳಗ್ಗೆ 11ರಿಂದ ಸಂಜೆ 5 ರವರೆಗೆ ಸಾರ್ವಜನಿಕರು ಮತ್ತು 5 ನೇ ತರಗತಿ ಮೇಲ್ಪಟ್ಟ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಬಹುದಾಗಿದೆ. ಈ ವೇಳೆ ದೇಶದ ಪ್ರತಿಷ್ಠಿತ ಯುದ್ದ ವಾಹಕ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ಸುವರ್ಣ ನೌಕೆಗಳ ವೀಕ್ಷಣೆ ಮುಕ್ತವಾಗಿ ಮಾಡಬಹುದಾಗಿದೆ.
ಕಾರವಾರದ ಅರಗಾದ ಮುಖ್ಯ ಗೇಟ್ನಿಂದ ಮಾತ್ರ ಪ್ರವೇಶ ಲಭ್ಯವಿದ್ದು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯೊಂದಿಗೆ ಬರುವುದು ಕಡ್ಡಾಯಗೊಳಿಸಲಾಗಿದೆ. ಪ್ರವೇಶ ಪಾಸುಗಳನ್ನು ಮುಖ್ಯ ಗೇಟಿನಲ್ಲೇ ನೀಡಲಾಗುತ್ತದೆ. ನೌಕಾನೆಲೆಯಿಂದ ವಾಪಸ್ ಬಂದಾಗ ಅವುಗಳನ್ನು ಪುನಃ ಭದ್ರತಾ ಸಿಬ್ಬಂದಿಗೆ ಕೊಡಬೇಕು. ದೃಶ್ಯ, ಧ್ವನಿ ಮುದ್ರಣ ಮಾಡಿಕೊಳ್ಳುವ ಕ್ಯಾಮೆರಾ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೌಕಾನೆಲೆಯ ಒಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ.