ಕರ್ನಾಟಕ

karnataka

ETV Bharat / state

ಐಟಿ ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ ಕಳ್ಳ ಅರೆಸ್ಟ್​: ನಗದು, ಚಿನ್ನ ವಶ

ಐಟಿ ಅಧಿಕಾರಿ ಎಂದು ಸುಳ್ಳು ಹೇಳಿ ಮತ್ತು ಸೈಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

Fraudulent custody of many cases
ಪ್ರಶಾಂತ ಟಿ.ಎಸ್ ಬಂಧಿತ ಆರೋಪಿ

By

Published : Mar 7, 2020, 3:33 AM IST

ಕಾರವಾರ: ಪೆಪ್ಸಿ ಕಂಪೆನಿಯ ಮುಖ್ಯ ವಿತರಕ ಕೆಲಸ ನೀಡುವುದಾಗಿ ನಂಬಿಸಿ, 1 ಲಕ್ಷ ಹಣ ಪಡೆದಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ ಟಿ.ಎಸ್ ಬಂಧಿತ ಆರೋಪಿ

ಮೈಸೂರು ಮೂಲದ ಪ್ರಶಾಂತ ಟಿ.ಎಸ್ ಬಂಧಿತ ಆರೋಪಿ. ಈತ ನಗರದ ಹಬ್ಬವಾಡ ನಿವಾಸಿ ವಿನೋದ ನಾಯ್ಕ ಎಂಬುವವರಿಗೆ ವಂಚಿಸಿದ್ದ. ಮುಂಗಡವಾಗಿ 15 ಲಕ್ಷ ನೀಡುವಂತೆ ಹಾಗೂ ನೋಂದಣಿಗಾಗಿ ಮುಂಗಡ 1 ಲಕ್ಷ ತೆಗೆದುಕೊಂಡಿದ್ದ ಎನ್ನಲಾಗಿದೆ.

ಈ ವಂಚನೆ ಬೆನ್ನಲ್ಲೆ ಪೊಲೀಸರು ನಗರದ ಲಂಡನ್ ಬ್ರೀಜ್ ಬಳಿ ಆರೋಪಿಯ ಹೆಡೆಮುರಿ ಕಟ್ಟಿದ್ದು, ಬಳಿಕ ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೊಪ್ಪಳ, ಹಾವೇರಿ, ಸಾಗರ, ಮಂಗಳೂರು ಹಾಗೂ ಮೈಸೂರಿನಲ್ಲಿ ಐಟಿ ಅಧಿಕಾರಿ ಎಂದು ಮತ್ತು ಸೈಟ್ ಕೊಡಿಸುವುದಾಗಿಯೂ ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

10ಕ್ಕೂ ಹೆಚ್ಚು ಮೊಬೈಲ್, 5.95 ಲಕ್ಷ ನಗದು, ಸುಮಾರು 13 ಲಕ್ಷ ಮೊತ್ತದ 327 ಗ್ರಾಂ. ಚಿನ್ನ ಹಾಗೂ ದುಬಾರಿ ಬೆಲೆಯ ಕಾರನ್ನು ಜಪ್ತಿ ಮಾಡಲಾಗಿದೆ.

ಕಾರವಾರ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್ಐ ಸಂತೋಷ ಕುಮಾರ ಎಂ ಹಾಗೂ ಸಿಬ್ಬಂದಿ ಮಂಜುನಾಥ ಗೊಂಡ, ರಾಮರಾಣಿ, ರಾಜೇಶ ನಾಯಕ, ರಾಮಾ ನಾಯ್ಕ ಅವರು ದಾಳಿ ಮಾಡಿದರು.

ABOUT THE AUTHOR

...view details