ಕರ್ನಾಟಕ

karnataka

By

Published : Sep 22, 2019, 4:48 PM IST

ETV Bharat / state

ಕೌನ್ ಬನೇಗಾ ಕರೋಡ್​ಪತಿ ಹೆಸರಲ್ಲಿ ವಂಚನೆ: ಇವರು ಕಳೆದುಕೊಂಡ ಹಣವೆಷ್ಟು?

ಗೌಂಡಿ ಕೆಲಸ ಮಾಡುವ ಕಾರ್ಮಿಕನೊಬ್ಬ ನಕಲಿ ಕರೆ ನಂಬಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

ಅಬ್ದುಲ್ ಖಾದರ್

ಕಾರವಾರ:ಹಿಂದಿಯಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್​ಪತಿ' ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಬಂದ ನಕಲಿ ಕರೆ ನಂಬಿ ಕಾರ್ಮಿಕನೊಬ್ಬ ಕೈ ಸುಟ್ಟುಕೊಂಡಿದ್ದಾನೆ!

ಮೋಸಹೋದ ವ್ಯಕ್ತಿ ಅಬ್ದುಲ್ ಖಾದರ್

ಬಾಲಿವುಡ್ ನಟ ಅಮಿತಾ ಬಚ್ಚನ್ ನಡೆಸಿ ಕೊಡುವ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಬಂದ ನಕಲಿ ಕರೆಯನ್ನೇ ಶಿರಸಿಯ ಹವಾಲ್ದಾರ ಗಲ್ಲಿಯ ಅಬ್ದುಲ್ ಖಾದರ್ ನಂಬಿ ಮೋಸ ಹೋಗಿದ್ದಾರೆ. ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದವನಿಗೆ ಲಕ್ಷಾಧಿಪತಿಯಾಗುವ ಆಸೆ ಚಿಗುರಿದೆ. ಇದೀಗ ಕಾರ್ಮಿಕ ಕಣ್ಣೀರು ಹಾಕೋದು ಬಿಟ್ಟು ಬೇರೇನೂ ಉಳಿದಿಲ್ಲ.

ಆಗಿದ್ದೇನು?

ಇದೇ ಸೆ.17 ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ‘ಕೌನ್ ಬನೇಗಾ ಕರೋಡ್‌ಪತಿ’ ಯಲ್ಲಿ ನಿಮಗೆ 25 ಲಕ್ಷ ಲಾಟರಿ ಬಂದಿದೆ. ಶುಭಾಶಯಗಳು! ಎಂದು ಹೇಳಿ ಮಾತು ಬೆಳೆಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಾಟ್ಸಪ್​ಗೆ ಕಳುಹಿಸುವುದಾಗಿ ಹೇಳಿ, ಹೆಚ್ಚಿನ ಮಾಹಿತಿಗಾಗಿ ಕೌನ್ ಬನೇಗಾ ಕರೋಡ್ ಪತಿ ವ್ಯವಸ್ಥಾಪಕ ರಾಣಾ ಪ್ರತಾಪ ಸಿಂಗ್ ಅವರನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ತಿಳಿಸಿದ್ದ ಎಂದು ವಂಚನೆಗೊಳಗಾದ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಇದನ್ನು ನಂಬಿದ ಅವರು ಮಾರನೇ ದಿನವೇ ರಾಣಾ ಪ್ರತಾಪ್ ಸಿಂಗ್​ಗೆ ಕರೆ ಮಾಡಿದ್ದಾರೆ. ಈ ವೇಳೆ ಹೌದು, ನಿಮಗೆ ಲಾಟರಿ ಬಂದಿದೆ ಎಂದು ಸುಳ್ಳು ಹೇಳಿ ನಂಬಿಸಲಾಗಿದೆ. ಮತ್ತೊಂದಿನ ಬಳಿಕ ಮತ್ತೆ ಕರೆ ಮಾಡಿ ಆಯ್ಕೆ ಶುಲ್ಕವಾಗಿ 7 ಸಾವಿರ ರೂ ತುಂಬಬೇಕು ಎಂದು ಅಕೌಂಟ್ ನಂಬರ್ ನೀಡಿದ್ದಾರೆ.

ಇದಕ್ಕೆ ಒಪ್ಪಿದ ಅಬ್ದುಲ್ ಹಣವನ್ನು ಮೋಸಗಾರರು ನೀಡಿದ ಅಕೌಂಟ್ ಹಣ ತುಂಬಿದ್ದಾರೆ. ಮತ್ತೆ ಕರೆ ಮಾಡಿ ಜಿಎಸ್ ಟಿ ಚಾರ್ಜ್ 25 ಸಾವಿರ ತುಂಬಲು ಹೇಳಿದ್ದು, ಅದನ್ನೂ ತುಂಬಿದ್ದಾರೆ. ಮತ್ತದೇ ಕರೆ! 25 ಸಾವಿರ ಶುಲ್ಕ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಅಷ್ಟೊಂದು ಹಣ ತನ್ನಲ್ಲಿಲ್ಲ ಎಂದು ಹೇಳಿ ಹಾಗೂ ಸಾಲ ಮಾಡಿ 8 ಸಾವಿರ ತುಂಬಿದ್ದಾರೆ.

ಇದೀಗ ಆ ನಂಬರ್​ಗೆ ಕರೆ ಮಾಡಿದರೇ ಸ್ವಿಚ್ ಆಫ್ ಬರುತ್ತಿದ್ದು, ಒಟ್ಟು 40 ಸಾವಿರ ರೂ ಹಣ ಕಳೆದುಕೊಂಡ ಅರಿವಾಗಿ ಅಬ್ದುಲ್ ಕಂಗಾಲಾಗಿದ್ದಾರೆ. ಈ ಬಗ್ಗೆ ತಕ್ಷಣ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರನ್ನು ಬಂಧಿಸಿ ತಮ್ಮ ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details