ಕರ್ನಾಟಕ

karnataka

ETV Bharat / state

ಬೊಮ್ಮಾಯಿಯವರನ್ನು ಆಯ್ಕೆ ಮಾಡಿದ್ದು, ಭವಿಷ್ಯದಲ್ಲಿ ವಿಜಯೇಂದ್ರರನ್ನು ಸಿಎಂ ಮಾಡಲು: ಆನಂದ್ ಅಸ್ನೋಟಿಕರ್

ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್. ಯಡಿಯೂರಪ್ಪನವರು ಹಿಡಿತ ಸಾಧಿಸಿದ್ದಾರೆ. ಬಿಎಸ್​ವೈ ಇನ್ಮುಂದೆ ಸೂಪರ್ ಸಿಎಂ ಆಗಿ ರಾಜ್ಯದಲ್ಲಿ ಅಧಿಕಾರ ಚಲಾಯಿಸಲಿದ್ದು, 2023ಕ್ಕೆ ವಿಜಯೇಂದ್ರರನ್ನು ಸಿಎಂ ಮಾಡಲು ಈಗ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದರು.

Anand Asnotikar
ಆನಂದ್ ಅಸ್ನೋಟಿಕರ್

By

Published : Jul 28, 2021, 2:06 PM IST

ಕಾರವಾರ:ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಿಎಂ ಮಾಡುವುದಕ್ಕಾಗಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಈಗ ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು, ಭವಿಷ್ಯದಲ್ಲಿ ವಿಜಯೇಂದ್ರರನ್ನು ಸಿಎಂ ಮಾಡಲು: ಆನಂದ್ ಅಸ್ನೋಟಿಕರ್

ಕಾರವಾರದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್. ಯಡಿಯೂರಪ್ಪ ಅವರು ಹಿಡಿತ ಸಾಧಿಸಿದ್ದಾರೆ. ಯಡಿಯೂರಪ್ಪ ಇನ್ಮುಂದೆ ಸೂಪರ್ ಸಿಎಂ ಆಗಿ ರಾಜ್ಯದಲ್ಲಿ ಅಧಿಕಾರ ಚಲಾಯಿಸಲಿದ್ದಾರೆ. 2023ಕ್ಕೆ ವಿಜಯೇಂದ್ರರನ್ನು ಸಿಎಂ ಮಾಡಲು ಈಗ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಆಗಿ ಸಿಎಂ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹಾಗೂ ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗಿಶ್ವರ್ ಅವರು ಐದಾರು ತಿಂಗಳಿನಿಂದ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದರು. ಯತ್ನಾಳ್ ಬೋನಿನಲ್ಲಿರುವ ಮಂಗನ ರೀತಿ ಕೂಗಾಟ ಮಾಡಿದರೂ ಏನು ಮಾಡಿಕೊಳ್ಳಲಾಗಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ, ಅವರಿಬ್ಬರಿಗೆ ಸಚಿವ ಸ್ಥಾನ ಮಾಡಬಾರದು ಎಂದು ಒತ್ತಾಯಿಸಿದರು.

ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ಬಿಜೆಪಿ ಒಳ್ಳೆಯದು. ಇದರಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ಈಗಿನ ಸರ್ಕಾರದ ಬೆಳವಣಿಗೆಯಿಂದ ಮುಂದೆ ಜೆಡಿಎಸ್​ಗೆ ಒಳ್ಳೆಯದಾಗಲಿದ್ದು, ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶುಭ ಕೋರಿದ ಬಿಜೆಪಿ ನಾಯಕರು

ABOUT THE AUTHOR

...view details