ಕರ್ನಾಟಕ

karnataka

ETV Bharat / state

ಅನಂತಕುಮಾರ್ ಗೆದ್ಮೇಲೆ 5 ವರ್ಷ ಕಾಣಿಸಲ್ಲ, ಈಗಲೂ ಕಾಣಿಸ್ತಿಲ್ಲ ಅಷ್ಟೇ.. ಮಾಜಿ ಸಚಿವ ಅಸ್ನೋಟಿಕರ್ - Former Minister Anand Asnotikar about MP Ananth Kumar hegde

ಐದು ವರ್ಷಗಳ ಕಾಲ ಕಾಣಿಸಿಕೊಳ್ಳದ ಅನಂತಕುಮಾರ್ ಅವರ ಅನಾರೋಗ್ಯದ ಬಗ್ಗೆ ಹಲವಾರು ಸಂದೇಶಗಳು ಬರುತ್ತಿವೆ. ಏನಾಗಿದೆ ಎಂಬುದು ಸ್ಪಷ್ಟತೆ ಇಲ್ಲ. ಆದರೆ, ಅವರ ಅನಾರೋಗ್ಯದಿಂದಾಗಿ ನನ್ನ ಮನಸ್ಸಿಗೆ ಏನೂ ನೋವಾಗಿಲ್ಲ. ಅವರು ಗೆದ್ದ ಮೇಲೆ ಕಾಣಿಸುವುದೇ ಇಲ್ಲ..

ಮಾಜಿ ಸಚಿವ ಆನಂದ್ ಅಸ್ನೋಟಿಕರ್
ಮಾಜಿ ಸಚಿವ ಆನಂದ್ ಅಸ್ನೋಟಿಕರ್

By

Published : Apr 5, 2021, 4:14 PM IST

ಕಾರವಾರ :ಸಂಸದ ಅನಂತಕುಮಾರ್ ಹೆಗಡೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಮ್ಮ ಕೆಲ ಸ್ನೇಹಿತರು ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದರು. ಆದರೆ, ಮೊನ್ನೆ ಅನಂತಕುಮಾರ್ ಹೆಗಡೆ ಜಾತ್ರೆಯಲ್ಲಿ ಕಾಣಿಸಿಕೊಂಡಿದ್ದು, ಗಟ್ಟಿಯಾಗಿದ್ದಾರೆ. ಹಾಗಾದರೆ, ಇದು ಕಷ್ಟ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಾಗ್ದಾಳಿ ನಡೆಸಿದ್ದಾರೆ.

ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಾಗ್ದಾಳಿ..

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ಕಾಣಿಸಿಕೊಳ್ಳದ ಅನಂತಕುಮಾರ್ ಅವರ ಅನಾರೋಗ್ಯದ ಬಗ್ಗೆ ಹಲವಾರು ಸಂದೇಶಗಳು ಬರುತ್ತಿವೆ. ಏನಾಗಿದೆ ಎಂಬುದು ಸ್ಪಷ್ಟತೆ ಇಲ್ಲ. ಆದರೆ, ಅವರ ಅನಾರೋಗ್ಯದಿಂದಾಗಿ ನನ್ನ ಮನಸ್ಸಿಗೆ ಏನೂ ನೋವಾಗಿಲ್ಲ. ಅವರು ಗೆದ್ದ ಮೇಲೆ ಕಾಣಿಸುವುದೇ ಇಲ್ಲ. ಈಗಲೂ ಕಾಣಿಸುತ್ತಿಲ್ಲ ಎಂದಿದ್ದಾರೆ.

ಅವರ ರಾಜಕೀಯ ನಿವೃತ್ತಿ ಹೇಳಿಕೆ ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ. ಅವರ ನಿವೃತ್ತಿ ಸಾಧ್ಯವೇ ಇಲ್ಲ. ಮುಂದೆಯೂ ಅವರೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜನರ ಬೆಂಬಲ ಇದ್ದರೆ ಪುನಃ ಗೆಲ್ಲುತ್ತಾರೆ ಎಂದಿದ್ದಾರೆ.

ABOUT THE AUTHOR

...view details