ಕರ್ನಾಟಕ

karnataka

ETV Bharat / state

ಸಂಬಂಧಿಕರೆಂದು ಹೇಳಿಕೊಂಡು ಜಿಲ್ಲೆಯ ಹಲವೆಡೆ  ಹಣಕ್ಕೆ ಬೇಡಿಕೆ​: ಯಾರಿಗೂ ದುಡ್ಡು ಕೊಡ್ಬೇಡಿ ಎಂದು ಕಾಶಿನಾಥ್ ನಾಯ್ಕ ಮನವಿ - Kashinath naik name miss use in Shirsi

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರಾದ ಕಾಶಿನಾಥ ನಾಯ್ಕ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದಾರೆ. ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿದ್ದಾರೆ. 2010ರ ಕಾಮನ್ವೆಲ್ತ್ ಗೇಮ್ಸ್​ನ ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, 2015ರಿಂದ 2017ರವರೆಗೆ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದರು.

ಕಾಶಿನಾಥ‌ ನಾಯ್ಕ
ಕಾಶಿನಾಥ‌ ನಾಯ್ಕ

By

Published : Nov 11, 2021, 5:39 AM IST

ಕಾರವಾರ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಆರಂಭಿಕ ಗುರುವಾಗಿದ್ದ ಶಿರಸಿ ಮೂಲದ ಕಾಶಿನಾಥ ನಾಯ್ಕ ಇದೀಗ ಎಲ್ಲೆಡೆಯೂ ಚಿರಪರಿಚಿತರು. ಇದೀಗ ಅವರನ್ನು ಕರೆದು ಸನ್ಮಾನಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಕೆಲವರು ಕಾಶೀನಾಥ್ ಜನಪ್ರೀತಯತೆಯನ್ನ ಬಂಡವಾಳವಾಗಿ ಮಾಡಿಕೊಂಡಿರುವವರಿಂದ ಅವರ ಹೆಸರನ್ನು ಕೆಡಿಸುವ ಕೃತ್ಯವೊಂದು ನಡೆಯುತ್ತಿದೆ. ಇದನ್ನ ಸ್ವತಃ ಕಾಶಿನಾಥ ನಾಯ್ಕ ಅವರಿಗೆ ಇರಿಸುಮುರಿಸಿಗೂ ಕಾರಣವಾಗಿದೆ.

ಹೌದು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರಾದ ಕಾಶಿನಾಥ ನಾಯ್ಕ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದಾರೆ. ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿದ್ದಾರೆ. 2010ರ ಕಾಮನ್ವೆಲ್ತ್ ಗೇಮ್ಸ್​ನ ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, 2015ರಿಂದ 2017ರವರೆಗೆ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದರು.

ಜಾವಲಿನ್ ಕೋಚ್​ ಕಾಶಿನಾಥ್ ನಾಯ್ಕ

ನೀರಜ್ ಚೋಪ್ರಾ ಈ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನ ಜಾವಲಿನ್​ ಎಸೆತದಲ್ಲಿ ಸ್ವರ್ಣ ಪದಕ ಗೆದ್ದು ಬಂದ ಬಳಿಕ ಅವರಿಗೆ ಈ ಹಿಂದೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ ನಾಯ್ಕ ಕೂಡ ಪ್ರಚಾರಕ್ಕೆ ಬಂದಿದ್ದರು. ಕಾಶಿನಾಥ್ ಅವರ ಈ ಗಣನೀಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರದ ಕ್ರೀಡಾ ಸಚಿವ ನಾರಾಯಣ ಗೌಡ ಅವರು 10 ಲಕ್ಷ ರೂ.ಗಳ ಬಹುಮಾನ ಮೊತ್ತವನ್ನು ಕೂಡ ಘೋಷಿಸಿದ್ದರು. ಆದರೆ ಆ ಬಳಿಕ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ್ದ ಹೇಳಿಕೆಯೊಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಕೊನೆಗೆ ನೀರಜ್ ಚೋಪ್ರಾ ಅವರೇ ಕಾಶಿನಾಥ ನಾಯ್ಕ ಅವರ ಪುಣೆಯಲ್ಲಿರುವ ಮನೆಗೆ ಭೇಟಿ ನೀಡುವ ಬಳಿಕ ಈ ವಿವಾದಗಳಿಗೆ ತಿಲಾಂಜಲಿ ಇಟ್ಟಿದ್ದರು. ಹೀಗಾಗಿ ಗೆಲುವು- ವಿವಾದಗಳಿಂದ ಪ್ರಸಿದ್ಧ ಪಡೆದಿದ್ದ ಕಾಶಿನಾಥ ನಾಯ್ಕ ಅವರ ಹೆಸರನ್ನು ಇದೀಗ ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳಲಾರಂಭಿಸಿದ್ದಾರಂತೆ. ಹೀಗಂತ ಖುದ್ದು ಕಾಶಿನಾಥ ನಾಯ್ಕ ಅವರೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ನನ್ನ ಹೆಸರಿನಲ್ಲಿ ಕೆಲವರು ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಅಂಗಡಿಗಳಿಗೆ ತೆರಳಿ, ತಾವು ಕಾಶಿನಾಥ ಅವರ ತಮ್ಮ- ಸಂಬಂಧಿ ಎಂದೆಲ್ಲ ಪರಿಚಯಿಸಿಕೊಂಡು ಹಣ ಕೇಳುತ್ತಿರುವ ಘಟನೆಗಳು ನಡೆದಿವೆ. ಹೀಗಾಗಿ ನನ್ನ ಹೆಸರು ಹೇಳಿಕೊಂಡು ಯಾರೇ ಬಂದರೂ ಹಣ ಕೊಡಬೇಡಿ. ಹಾಗೇನಾದರೂ ಇದ್ದಲ್ಲಿ ನನ್ನ ಗಮನಕ್ಕೆ ತಂದ ಬಳಿಕ ಮುಂದುವರಿಯಿರಿ. ಸಾಮಾಜಿಕ ಜಾಲತಾಣಗಳ ಮೂಲಕ ಅಥವಾ ನೇರವಾಗಿ ನನ್ನನ್ನ ಸಂಪರ್ಕಿಸಿ' ಎಂದು ಕಾಶಿನಾಥ ನಾಯ್ಕ ಮನವಿ ಮಾಡಿಕೊಂಡಿದ್ದಾರೆ.

ಇಷ್ಟು ದಿನ ಫೇಸ್ ಬುಕ್​ನಲ್ಲಿ ಮಾತ್ರ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಹಣ ಕೇಳುವ ತಂಡವಿತ್ತು ಎಂದುಕೊಂಡಿದ್ದವರಿಗೆ, ಇದೀಗ ಕಾಶಿನಾಥ ನಾಯ್ಕ ಅವರ ಈ ಪ್ರಕರಣ ಬೆರಗಾಗುವಂತೆ ಮಾಡಿದೆ.

ಇದನ್ನು ಓದಿ:ಸ್ವರ್ಣ'ಬಾಹು' ನೀರಜ್‌ ಚೋಪ್ರಾ ಆರಂಭಿಕ ಕೋಚ್‌ ಈ ಕನ್ನಡಿಗ.. ಅವರು ಕ್ರೀಡೆ ಬಗ್ಗೆ ಹೀಗಂತಾರೆ..

ABOUT THE AUTHOR

...view details