ಕಾರವಾರ: ಫೋರ್ಜರಿ ಸಹಿಮಾಡಿ ಬ್ಯಾಂಕಿಗೆ ಮೋಸ ಮಾಡಿದ ಆರೋಪಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30 ಸಾವಿರ ದಂಡ ವಿಧಿಸಿದೆ. ಕುಮಟಾದ ದೇವರಹಕ್ಕಲದ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬಂದಿತ ಆರೋಪಿಯಾಗಿದ್ದು, ತಾಲೂಕು ಪಂಚಾಯತ್ನಲ್ಲಿ ಎಫ್ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬ್ಯಾಂಕಿನ ಲೆಟರ್ ಹೆಡ್ ಮತ್ತು ಫಾರ್ಮ ನಂ. 35ರಲ್ಲಿ ಬ್ಯಾಂಕಿನವರು ಹೈಪೋಥಿಕೇಶನ್ ಸ್ಥಗಿತಗೊಳಿಸಲು ಹೊನ್ನಾವರ ಎ.ಆರ್.ಟಿ.ಓಗೆ ಬ್ಯಾಂಕಿನಿಂದ ತಂದಿರುವ ಪತ್ರದಂತೆ ನಕಲಿಸಿದ್ದ ಪತ್ರವನ್ನು ನೀಡಿದ್ದರು. ಅಲ್ಲದೇ ಬ್ಯಾಂಕ್ ವ್ಯವಸ್ಥಾಪಕರ ನಕಲಿ ಸಹಿ ಮಾಡಿ ಪತ್ರದ ಮೇಲೆ ಬ್ಯಾಂಕ್ ಶೀಲ್ನ್ನು ಹಾಕಿದ್ದರು. ನಕಲಿ ಫಾರ್ಮ್ನ್ನು ಎ.ಆರ್.ಟಿ.ಓ ಕಚೇರಿಯಲ್ಲಿ ಹಾಜರುಪಡಿಸಿ ತಮ್ಮ ವಾಹನಕ್ಕೆ ಬ್ಯಾಂಕನೊಂದಿಗೆ ಇರುವ ಹೈಪೋಥಿಕೇಶನ್ ಸ್ಥಗಿತಗೊಳಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ್ದರು ಎನ್ನಲಾಗ್ತಿದೆ.