ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್​ ಪತ್ರಿಭಟನೆ..! - protest in Bhatkal

ಶಿವಮೊಗ್ಗದ ಶರಾವತಿ ಅಭಯಾರಣ್ಯ ಯೋಜನೆಗೆ ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳ ಅರಣ್ಯ ಪ್ರದೇಶವನ್ನು ಸೇರಿಸಿ ಅಂತಿಮ ಆದೇಶ ಹೊರಡಿಸುವ ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರಣ್ಯ ಅತಿಕ್ರಮಣದಾರರ ಅರ್ಜಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಮರ್ಪಕವಾಗಿ ಪುನರ್​ ಪರಿಶೀಲನೆ ಆಗದಿರುವ ಹಿನ್ನೆಲೆ, ಜಿಲ್ಲಾ ಅರಣ್ಯ ಭೂಮಿ‌ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ಇಲ್ಲಿನ ಹಳೆ ಕುಬೇರ ಹೋಟೆಲ್ ಹಿಂಬದಿಯಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್​ ಪತ್ರಿಭಟನೆ ನಡೆಯಿತು.

ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್​ ಪತ್ರಿಭಟನೆ..!

By

Published : Oct 11, 2019, 5:31 AM IST


ಭಟ್ಕಳ:ಶಿವಮೊಗ್ಗದ ಶರಾವತಿ ಅಭಯಾರಣ್ಯ ಯೋಜನೆಗೆ ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳ ಅರಣ್ಯ ಪ್ರದೇಶವನ್ನು ಸೇರಿಸಿ ಅಂತಿಮ ಆದೇಶ ಹೊರಡಿಸುವ ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರಣ್ಯ ಅತಿಕ್ರಮಣದಾರ ಅರ್ಜಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಮರ್ಪಕವಾಗಿ ಪುನರ್​ ಪರಿಶೀಲನೆ ಆಗದಿರುವ ಹಿನ್ನೆಲೆ, ಜಿಲ್ಲಾ ಅರಣ್ಯ ಭೂಮಿ‌ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ಇಲ್ಲಿನ ಹಳೆ ಕುಬೇರ ಹೋಟೆಲ್ ಹಿಂಬದಿಯಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್​ ಪತ್ರಿಭಟನೆ ನಡೆಯಿತು.

ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್​ ಪತ್ರಿಭಟನೆ..!

ಅರಣ್ಯ ಅತಿಕ್ರಮಣ ಹೋರಾಟದ ಸಂಘಟಕಿ ನಾಗರತ್ನ ಪೂಜಾರಿ ಮಾತನಾಡಿ, ಸರಕಾರ ಸರಿಯಾದ ಸಮಯಕ್ಕೆ‌ ಜನರಿಂದ ತೆರಿಗೆ ವಸೂಲಿ ಮಾಡಿಸಿಕೊಳ್ಳುತ್ತದೆ.‌ ಸರಕಾರ ಅರಣ್ಯ ಅತಿಕ್ರಮಣಕ್ಕೆ ಅವಕಾಶ ನೀಡುತ್ತಿಲ್ಲವಾಗಿದ್ದರೆ ಎಲ್ಲರಿಗೂ ಪಟ್ಟ ಕೊಡಲಿ. ಈಗಾಗಲೇ ಶೇ.80ರಷ್ಟು ಅತಿಕ್ರಮಣದಾರರಿದ್ದು, ಅವರಿಂದ ತೆರಿಗೆ ಸಂಗ್ರಹಿಸುತ್ತಿದೆ.‌ ಎಲ್ಲರಿಗೂ ಅತಿಕ್ರಮಣ ಜಾಗದಲ್ಲಿ ಉಳಿಯಲು ಅವಕಾಶ ನೀಡಿ ಇಲ್ಲವಾದಲ್ಲಿ ಎಲ್ಲರಿಗೂ ಪಟ್ಟ ನೀಡಿ ಎಂದು ಆಗ್ರಹಿಸಿದರು.

ಜಿಲ್ಲಾ ಅರಣ್ಯ ಭೂಮಿ‌ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಮತನಾಡಿ, ಸದ್ಯ ಅತಿಕ್ರಮಣದಾರ ಸ್ಥಿತಿ ಗೊಂದಲದ ಜೀವನವಾಗಿದ್ದು,ನಮಗೆ ನ್ಯಾಯ ಸಿಗದಿದ್ದರೆ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಲಿದ್ದೇವೆ. ಗಂಭೀರ ಆಪಾದನೆಗೆ ಒಳಗಾಗಿರುವ ಅರಣ್ಯ ಸಿಬ್ಬಂದಿಗಳನ್ನು ತಕ್ಷಣ ಸೇವಾ ಕ್ಷೇತ್ರದ ವ್ಯಾಪ್ತಿಯಿಂದ ವರ್ಗಾವಣೆ ಮಾಡಬೇಕು. ಮುಖ್ಯವಾಗಿ ಉಪವಲಯ ಅರಣ್ಯಾಧಿಕಾರಿ, ವನಪಾಲಕರು, ಗಾರ್ಡ್​ಗಳು, ವಾಚಮನ್​ಗಳಿಗೆ ಕಾನೂನಿನ ಅರಿವು ಕಡಿಮೆಯಿದ್ದು, ಅವರಿಗೆ ಕಾನುನಿನ ಶಿಬಿರದ ಅವಶ್ಯಕತೆಯಿದೆ ಅವರನ್ನು ಅಕ್ಟೋಬರ್​ 25ರೊಳಗಾಗಿ ವರ್ಗಾವಣೆಗೊಳಿಸದಿದ್ದಲ್ಲಿ ಅಕ್ಟೋಬರ್ 30 ರಂದು ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಬರಬೇಕೆಂದು ಪ್ರತಿಭಟನಾಕಾರರು ಭಟ್ಕಳ ಸಿಪಿಐ ಅವರಿಗೆ ಒತ್ತಾಯಿಸಿದ್ದು,ಅರಣ್ಯ ಅಧಿಕಾರಿಗಳ ಬರುವಿಕೆಗೆ ಕಾದು ಕಾದು ಪತಿಭಟನಕಾರರು ಧಿಕ್ಕಾರ ಕೂಗಿ ಬಾಯಿ ಬಡಿದುಕೊಂಡು ಪತಿಭಟಿಸಿದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬರದೆ ಹೋದರೆ ಅರಣ್ಯ ಇಲಾಖೆಗೆ ಹೋಗಿ ಮುತ್ತಿಗೆ ಹಾಕುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಯ ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆ, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪತ್ರಿಭಟನಾಕಾರರ ಆಗ್ರಹ ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಗೆ ಸ್ಥಳಕ್ಕೆ ತೆರಳಿ ಅವರ ಮನವಿ ಸ್ವೀಕರಿಸಿ ಕ್ರಮಕ್ಕೆ ಮುಂದಾಗುವಂತೆ ತಿಳಿಸಿದ ಹಿನ್ನೆಲೆ, ಸ್ಥಳಕ್ಕೆ ಬಂದ ಸಹಾಯಕ ಆಯುಕ್ತ ಸಾಜಿದ ಅಹಮದ್ ಮುಲ್ಲಾ ಮನವಿ ಸ್ವೀಕರಿಸಿದ್ರು.

ABOUT THE AUTHOR

...view details