ಕರ್ನಾಟಕ

karnataka

ETV Bharat / state

ಯಲ್ಲಾಪುರದಲ್ಲಿ ಕಾಡಾನೆಗಳ ಹಾವಳಿ.. ಆತಂಕದಲ್ಲಿ ರೈತರು

ಉತ್ತರ ಕನ್ನಡದ ಯಲ್ಲಾಪುರದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಹಗಲಿನ ವೇಳೆಯೇ ಗುಂಪು ಗುಂಪಾಗಿ ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.

ಯಲ್ಲಾಪುರದಲ್ಲಿ ಕಾಡಾನೆಗಳ ಹಾವಳಿ...ಆತಂಕದಲ್ಲಿ ರೈತರು

By

Published : Oct 12, 2019, 10:54 PM IST

ಶಿರಸಿ:ಉತ್ತರ ಕನ್ನಡದ ಯಲ್ಲಾಪುರದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಹಗಲಿನ ವೇಳೆಯೇ ಗುಂಪು ಗುಂಪಾಗಿ ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.

ಯಲ್ಲಾಪುರದಲ್ಲಿ ಕಾಡಾನೆಗಳ ಹಾವಳಿ.. ಆತಂಕದಲ್ಲಿ ರೈತರು

ತಲಾ ಮೂರು ಆನೆಗಳ ಮೂರು ತಂಡಗಳಿದ್ದು, ಯಲ್ಲಾಪುರದ ಮಾದೇವನಕೊಪ್ಪ ಭಾಗದ ರೈತರ ಗದ್ದೆ ತುಳಿದು ಹಾನಿ ಮಾಡುತ್ತಿವೆ. ಒಂದು ವಾರದಿಂದ ಕಿರವತ್ತಿ, ಮದನೂರು ಭಾಗದಲ್ಲಿ ಬೀಡು ಬಿಟ್ಟಿದ್ದು, ರೈತರು ಆತಂಕಗೊಂಡಿದ್ದಾರೆ.

ಪ್ರತಿ ವರ್ಷ ಯಲ್ಲಾಪುರ ಮಾರ್ಗವಾಗಿ ಮುಂಡಗೋಡಿಗೆ ಸಾಗುತ್ತಿದ್ದ ಆನೆಗಳ ಹಿಂಡು ಅತಿಯಾದ ಮಳೆಯ ಕಾರಣ ರಸ್ತೆ ಹಾಳಾಗಿ ಯಲ್ಲಾಪುರದಲ್ಲೇ ಉಳಿದುಕೊಂಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರತಿ ದಿನ ಹಾವಳಿ ಹೆಚ್ಚಾಗುತ್ತಿರುವ ಕಾರಣ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ABOUT THE AUTHOR

...view details