ಕಾರವಾರ/ಉತ್ತರ ಕನ್ನಡ:ಕರ್ನಾಟಕ ರಾಜ್ಯೋತ್ಸವ ನಿಮಿತ್ತ ‘ಕನ್ನಡಕ್ಕಾಗಿ ನಾವು’ ಅಭಿಯಾನದಲ್ಲಿ ನಗರದ ಹಿಂದೂ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಆಹಾರ ಮೇಳ ಹಾಗೂ ಕನ್ನಡ ನಾಡಿನ ವೇಷ ಭೂಷಣಗಳ ಉಡುಗೆ ತೊಡುಗೆಗಳ ಪ್ರದರ್ಶನ ಗಮನ ಸೆಳೆಯಿತು.
ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ಹಾಗೂ ಶಿಕ್ಷಕರು ತಾವು ತಯಾರಿಸಿದ ಮತ್ತು ಮನೆಯಲ್ಲಿ ತಯಾರು ಮಾಡಿ ತಂದ ಕರಾವಳಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ವಿವಿಧ ಬಗೆಯ ಖಾದ್ಯಗಳ ವಿಭಿನ್ನವಾಗಿ ಪ್ರದರ್ಶಿಸಿದರು. ಪ್ರಮುಖವಾಗಿ ಮೀನು ಹಾಗೂ ಚಿಕನ್ ಖಾದ್ಯಗಳು, ರಾಗಿ ಮುದ್ದೆ, ಜೋಳದ ರೊಟ್ಟಿ, ಕಾಳು ಪಲ್ಯ, ವಿವಿಧ ಬಗೆಯ ಸ್ವೀಟ್, ಉಪ್ಪಿನಕಾಯಿ, ಹೋಳಿಗೆ ತುಪ್ಪ, ಉಪ್ಪಿಟ್ಟು, ಕೇಸರಿ, ನೀರು ದೋಸೆ ಸೇರಿದಂತೆ 150ಕ್ಕೂ ಹೆಚ್ಚಿನ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.
ಇದೇ ವೇಳೆ, ಕನ್ನಡ ನಾಡಿನ ಉಡುಗೆ ತೋಡುಗೆಗಗಳ ವೇಷಭೂಷಣ ಕೂಡ ಗಮನ ಸೆಳೆಯಿತು. ಉತ್ತರ ಕರ್ನಾಟಕ ಭಾಗದ ವಿವಿಧ ಶೈಲಿಯ ಉಡುಗೆಗಳನ್ನು ಉಟ್ಟು ಬಂದಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.