ಕಾರವಾರ:ಜಿಲ್ಲೆಯಲ್ಲಿ ತುರ್ತು ಆಹಾರದ ಅಗತ್ಯವಿದ್ದವರಿಗೆ ಜಿಲ್ಲಾಡಳಿತದಿಂದ ಅಂಗನವಾಡಿಗಳಲ್ಲಿ ಆಹಾರ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ.
ಅಗತ್ಯವಿದ್ದವರಿಗೆ ಆಹಾರ ನೀಡಲು ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ - Food for the needy
ಲಾಕ್ಡೌನ್ನಿಂದಾಗಿ ಆಹಾರ ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಆಹಾರ ವಿತರಿಸುವ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ.

ಡಾ. ಹರೀಶ್ ಕುಮಾರ್
ತುರ್ತು ಆಹಾರದ ಅಗತ್ಯವಿರುವಂತಹವರು ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ರಾಜೇಂದ್ರ ಬೇಕಲ್ (ಮೊಬೈಲ್ ಸಂಖ್ಯೆ: 9880301250) ಅವರನ್ನು ಸಂಪರ್ಕಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಸಮೀಪದ ಅಂಗನವಾಡಿಗಳ ಮೂಲಕ ಆಹಾರ ಒದಗಿಸಲಾಗುವುದು. ಹಾಗೂ ಆಹಾರವನ್ನು ತೆಗೆದುಕೊಂಡು ಹೋಗಲು ಬಾಕ್ಸ್ ತೆಗೆದುಕೊಂಡು ಬರಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ವಿನಂತಿಸಿದ್ದಾರೆ.