ಕಾರವಾರ(ಉತ್ತರ ಪ್ರದೇಶ): ನೌಕಾಪಡೆಯ ಪಶ್ಚಿಮ ವಲಯದ ಫ್ಲ್ಯಾಗ್ ಆಫೀಸರ್ ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿ ಸೀಬರ್ಡ್ ಎರಡನೇ ಹಂತದ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಗುರುವಾರ ಹಾಗೂ ಶುಕ್ರವಾರ ಎರಡು ದಿನ ಕದಂಬ ನೌಕಾನೆಲೆಗೆ ಆಗಮಿಸಿದ್ದ ಅವರನ್ನು ಕರ್ನಾಟಕ ನೌಕಾ ವಿಭಾಗದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಸ್ವಾಗತಿಸಿದರು.
ಕದಂಬ ನೌಕಾನೆಲೆಗೆ ಪಶ್ಚಿಮ ವಲಯ ಎಫ್ಒಸಿ ಭೇಟಿ: ಸೀಬರ್ಡ್ ಕಾಮಗಾರಿ ಪರಿಶೀಲನೆ - etv bharat karnataka
ಕದಂಬ ನೌಕಾನೆಲೆಗೆ ಪಶ್ಚಿಮ ವಲಯ ಎಫ್ಒಸಿ ಅಜೇಂದ್ರ ಬಹದ್ದೂರ್ ಸಿಂಗ್ ಭೇಟಿ - ಸೀಬರ್ಡ್ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ- ಹಡಗಿನ ಸಿಬ್ಬಂದಿಯೊಂದಿಗೆ ಸಂವಾದ
ನಂತರ ಭಾರತೀಯ ನೌಕಾಪಡೆಯ ವಿಮಾನವಾಹಕ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯಕ್ಕೆ ಭೇಟಿ ನೀಡಿ ಹಡಗಿನ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ವಿವಿಧ ಹಡಗುಗಳ ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯ ಪ್ರಗತಿ ಹಾಗೂ ಕರ್ನಾಟಕ ನೌಕಾ ಪ್ರದೇಶ ವ್ಯಾಪ್ತಿಯಲ್ಲಿ ನಡೆಸಲಾಗುವ ಚಟುವಟಿಕೆ ಪರಿಶೀಲಿಸಿದರು. ಅಗ್ನಿವೀರರ ನೇಮಕಾತಿಯೊಂದಿಗೆ ನೌಕಾಪಡೆಯಲ್ಲಿನ ಪರಿವರ್ತನೆ ಹಾಗೂ ಹಿರಿಯ ನಾವಿಕರ ಪಾತ್ರ ಮತ್ತು ಭಾರತೀಯ ನೌಕಾಪಡೆಯ ಆತ್ಮನಿರ್ಭರತೆ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಹಗಲು ಹೊತ್ತಲ್ಲಿ ಮೊಟ್ಟೆ ಇಡಲು ಬಂದ ಅಪರೂಪದ ಓಲಿವ್ ರಿಡ್ಲೆ ಕಡಲಾಮೆ