ಕರ್ನಾಟಕ

karnataka

ETV Bharat / state

ಮಹಾಮಳೆಗೆ ಮುಳುಗಿದ ಬದುಕು: ಉತ್ತರ ಕನ್ನಡ ಜಿಲ್ಲೆಯ ಗ್ರಾಮದ ರಸ್ತೆಗಳೆಲ್ಲಾ ಕೆಸರು ಗದ್ದೆ - ಉತ್ತರ ಕನ್ನಡ ಜಿಲ್ಲೆಯ ಪ್ರವಾಹ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ತಗ್ಗಿದ ನೆರೆಯಿಂದಾಗಿ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಕೆಸರಲ್ಲಿ ಮುಳುಗಿದ್ದು, ತಹಶೀಲ್ದಾರ್​, ಪೊಲೀಸರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ತೆರವು ಕಾರ್ಯಾಚರಣೆ ನಡೆದಿದೆ.

ಪ್ರವಾಹದ ನೀರಿನಮಟ್ಟ ತಗ್ಗಿದ್ದು, ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ

By

Published : Aug 11, 2019, 7:42 PM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನರು ತಮ್ಮ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ.

ಪ್ರವಾಹದ ನೀರಿನ ಮಟ್ಟ ತಗ್ಗಿದ್ದು, ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ

ಅಪಾರ ಪ್ರಮಾಣದಲ್ಲಿ ಕೆಸರು ನೀರಿನೊಂದಿಗೆ ಮನೆಯೊಳಗೆ ಸೇರಿದ್ದರಿಂದ ಗಬ್ಬು ವಾಸನೆ ಹಬ್ಬಿದೆ. ನೆರೆಯಿಂದ ಮುಳುಗಡೆಯಾಗಿದ್ದ ಕಾರವಾರ, ಅಂಕೋಲಾ ಹಾಗೂ ಕುಮಟಾ ಭಾಗದ ಗ್ರಾಮಗಳು ಕಾಣಿಸಿಕೊಳ್ಳುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಹಕ್ಕೆಅಂಕೋಲಾ ತಾಲೂಕಿನ ಗಂಗಾವಳಿ ನದಿಯಂಚಿನ ವಾಸರೆ ಕುದರಿಗಿ ಗ್ರಾಮಸ್ಥರು ತಮ್ಮ ಮನೆಗಳನ್ನು ಕಂಡು ಆಶ್ವರ್ಯಗೊಂಡಿದ್ದಾರೆ. ಮನೆಯ ಸುತ್ತೆಲ್ಲಾ ಅರ್ಧ ಅಡಿಯಷ್ಟು ಕೆಸರು ತುಂಬಿಕೊಂಡಿದೆ. ಮನೆಯಲ್ಲಿಯೇ ಬಿಟ್ಟಿದ್ದ ವಸ್ತುಗಳು ನದಿಪಾಲಾಗಿದೆ. ಇನ್ನೂ ಕೆಲವು ಮನೆಗಳು ಗುರುತೇ ಸಿಗದಷ್ಟು ಹಾನಿಗೊಳಗಾಗಿವೆ. ನಾಟಿ ಮಾಡಿದ ಗದ್ದೆಗಳ ಗುರುತು ಸಿಗದಂತಾಗಿದೆ.

ಎರಡು ದಿನಗಳಿಂದ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಒಂದು ತಿಂಗಳ ಹಿಂದೆ ನಾಟಿ ಮಾಡಿದ್ದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಭತ್ತದ ಸಸಿ ಕೊಳೆತು ಹೋಗಿದ್ದು, ಕೆಲ ಭಾಗಗಳಲ್ಲಿ ಗದ್ದೆಯೋ, ಮಣ್ಣು ಗುಡ್ಡೆಯೋ ಎಂಬ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆಗಳು ಸಂಪೂರ್ಣ ಕೆಸರಿನಿಂದ ತುಂಬಿಕೊಂಡು, ಅಂಕೋಲಾ ತಹಶೀಲ್ದಾರ್ ಹಾಗೂ ಪೊಲೀಸರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸಂಪರ್ಕಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details