ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿ ಪ್ರವಾಹದ ಎಫೆಕ್ಟ್; 332 ಪ್ರಾಥಮಿಕ ,ಪ್ರೌಢ ಶಾಲೆಗಳಿಗೆ ಹಾನಿ - ೬೬೪ ಲಕ್ಷ ರೂ. ನಷ್ಟ

ಭಾರಿ ಮಳೆಯ ಪರಿಣಾಮವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ 332 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಹಾನಿಯಾಗಿದೆ. ಆಗಸ್ಟ್ ಮೊದಲನೇ ವಾರದಲ್ಲಿ ಸುರಿದ ಮಳೆಗೆ ಅಭದ್ರತೆಯ ಆತಂಕ ಉಂಟಾಗಿದ್ದು, ಪ್ರವಾಹದಿಂದಾಗಿ ಮಕ್ಕಳ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಶಿರಸಿಯಲ್ಲಿ ಪ್ರವಾಹದ ಎಫೆಕ್ಟ್; 332 ಪ್ರಾಥಮಿಕ ,ಪ್ರೌಢ ಶಾಲೆಗಳಿಗೆ ಹಾನಿ

By

Published : Aug 26, 2019, 11:53 PM IST

ಶಿರಸಿ:ಭಾರಿ ಮಳೆಯ ಪರಿಣಾಮವಾಗಿ ಶೈಕ್ಷಣಿಕ ಜಿಲ್ಲೆಯ 332 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಹಾನಿಯಾಗಿದೆ. ಆಗಸ್ಟ್ ಮೊದಲನೇ ವಾರದಲ್ಲಿ ಸುರಿದ ಮಳೆಗೆ ಅಭದ್ರತೆಯ ಆತಂಕ ಉಂಟಾಗಿದ್ದು, ಪ್ರವಾಹದಿಂದಾಗಿ ಮಕ್ಕಳ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಜಿಲ್ಲೆಯಲ್ಲಿ ಕೆಲವು ಮಣ್ಣಿನ ಗೋಡೆ ಇರುವ ಶಾಲೆಗಳಿದ್ದು, ವಾರಗಟ್ಟಲೆ ಸುರಿದ ಮಳೆಗೆ ಶಾಲೆ ಒಳಗೆ ನೀರು ತುಂಬಿದೆ. ಅವು ಈಗ ಬೀಳುವ ಸಾಧ್ಯತೆ ಇದೆ. ಇದರಿಂದಾಗ ವಿದ್ಯಾರ್ಥಿಗಳು ಶಾಲೆಗೆ ತೆರಳಿದರೂ ಆತಂಕದಲ್ಲೇ ಪಾಠ ಕೇಳುವಂತಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 280 ಪ್ರಾಥಮಿಕ ಹಾಗೂ 52 ಪ್ರೌಢ ಶಾಲೆಗಳಿಗೆ ಹಾನಿಯಾಗಿದ್ದು, ಇವುಗಳಿಂದ ಒಟ್ಟು 664 ಲಕ್ಷ ರೂ. ನಷ್ಟವಾಗಿದೆ.

ಶಿರಸಿಯಲ್ಲಿ ಪ್ರವಾಹದ ಎಫೆಕ್ಟ್; 332 ಪ್ರಾಥಮಿಕ ,ಪ್ರೌಢ ಶಾಲೆಗಳಿಗೆ ಹಾನಿ

18 ಶಾಲೆಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಉಳಿದ ಶಾಲೆಗಳಲ್ಲಿ ಹಂಚು ಒಡೆದಿರುವುದು, ಗೋಡೆ ಬಿರುಕು ಬಿಟ್ಟಿರುವುದು, ಚಾವಣಿ ಮುರಿದು ಬಿದ್ದಿರುವುದು ಕಂಡು ಬಂದಿದೆ. ಹಳಿಯಾಳ, ಯಲ್ಲಾಪುರ ಹಾಗೂ ಜೊಯಿಡಾ ತಾಲೂಕುಗಳಲ್ಲಿ ಹೆಚ್ಚಿನ ನಷ್ಟ ಉಂಟಾಗಿದ್ದು, ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡಿನಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ.

ಪ್ರಾಥಮಿಕ ಶಾಲೆಗಳ ಹಾನಿಯಿಂದ 5.60 ಕೋಟಿ ರೂ. ಹಾಗೂ ಪ್ರೌಢ ಶಾಲೆಗಳಲ್ಲಿ 1.04 ಕೋಟಿ ರೂ. ನಷ್ಟ ಉಂಟಾಗಿದೆ.
ಕೆಲವು ಕಡೆಗಳಲ್ಲಿ ಮನೆಗಳು ಉರುಳಿ, ಜಲಾವೃತವಾಗಿ ಪಠ್ಯಪುಸ್ತಕಗಳು ಒದ್ದೆಯಾಗಿ ಉಪಯೋಗಕ್ಕೆ ಬಾರದಂತಾಗಿದೆ. ಆದರೆ ಶಾಲೆಗಳಲ್ಲಿ ಯಾವುದೇ ರೀತಿಯ ಪಠ್ಯ ಪುಸ್ತಕಗಳಿಗೆ ತೊಂದರೆಯಾಗಿಲ್ಲ. ಮನೆಯಲ್ಲಿ ತೊಯ್ದಿರುವ ಕಾರಣ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆ ಆಗಲಿದೆ. ಇಂತಹ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹೊಸದಾಗಿ ವಿತರಣೆ ಮಾಡುವ ಕೆಲಸ ಹಾಗೂ ಶೀಘ್ರ ಶಿಥಿಲಗೊಂಡಿರುವ ಶಾಲೆಗಳ ಅಭಿವೃದ್ಧಿ ಕೆಲಸ ಶಿಕ್ಷಣ ಇಲಾಖೆಯಿಂದ ಆಗಬೇಕು ಎನ್ನುವುದು ಪಾಲಕರ ಹಾಗೂ ಎಸ್.ಡಿ.ಎಮ್.ಸಿ. ಅಧ್ಯಕ್ಷರುಗಳ ಆಗ್ರಹವಾಗಿದೆ.

ABOUT THE AUTHOR

...view details