ಕರ್ನಾಟಕ

karnataka

ETV Bharat / state

ನೌಕಾನೆಲೆ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿ ಹಾರಾಡಿದ ತ್ರಿವರ್ಣ ಧ್ವಜ - ಅಂಜುದೀವ್ ದ್ವೀಪದಲ್ಲಿ ತ್ರೀವರ್ಣ ಧ್ವಜೋರೋಹಣ

ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆಯ ದೃಷ್ಠಿಯಲ್ಲಿ ಪ್ರಮುಖವಾಗಿದೆ..

Flag hoisted in Karwar due to 75th Independence day
ಅಂಜುದೀವ್ ದ್ವೀಪದಲ್ಲಿ ತ್ರೀವರ್ಣ ಧ್ವಜವನ್ನು ಹಾರಿಸಿ ಗೌರವ ಸಲ್ಲಿಕೆ

By

Published : Aug 13, 2021, 6:58 PM IST

ಕಾರವಾರ :75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸಲು ಕರೆ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿನ ನೌಕಾನೆಲೆ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಗೌರವ ಸಲ್ಲಿಸಲಾಯಿತು.

ನೌಕಾನೆಲೆ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿ ಹಾರಾಡಿದ ತ್ರಿವರ್ಣ ಧ್ವಜ..

75ನೇ ವರ್ಷದ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ದೇಶದಾದ್ಯಂತ ಭಾರತೀಯ ನೌಕಾಪಡೆಯಿಂದ 75 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸಲಾಗಿದೆ. ನವದೆಹಲಿಯ ಕೊಠಾರಿ ಕ್ರೀಡಾಂಗಣದಲ್ಲಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಈ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಿದರು.

ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆಯ ದೃಷ್ಠಿಯಲ್ಲಿ ಪ್ರಮುಖವಾಗಿದೆ ಎಂದರು.

ABOUT THE AUTHOR

...view details