ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ 8 ಮಂದಿ ಗುಣಮುಖರಾದ ಬೆನ್ನಲ್ಲೇ ಮತ್ತೆ ಐವರಿಗೆ ಸೋಂಕು! - ಕೊರೊನಾ ವೈರಸ್​ ಪ್ರಕರಣಗಳು

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 8 ಜನ ಗುಣಮುಖರಾಗಿದ್ದಾರೆ. ಇದೇ ವೇಳೆ 5 ಐವರಲ್ಲಿ ಕೊರೊನಾ ಸೋಂಕು ಇರುವಿಕೆ ಪತ್ತೆಯಾಗಿದೆ.

five-corona-cases-found-in-karwar
ಉತ್ತರಕನ್ನಡ ಜಿಲ್ಲೆ ಸೋಂಕಿತರು

By

Published : Jul 4, 2020, 2:06 AM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಂಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದು, ಮತ್ತೆ ಐದು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಗುಣಮುಖರಾದವರ ಪೈಕಿ ಮೂರು ವರ್ಷದ ಹೆಣ್ಣುಮಗು, ಆಕೆಯ ತಾಯಿ ಹಾಗೂ ಆರು ಮಂದಿ ಪುರುಷರಿದ್ದಾರೆ. ಅವರಲ್ಲಿ ಓರ್ವ ಚಿಕ್ಕಮಗಳೂರು ಮೂಲದ ಯುವಕನಾಗಿದ್ದು, ಉಳಿದಂತೆ ಭಟ್ಕಳದ ಇಬ್ಬರು, ಹೊನ್ನಾವರ, ದಾಂಡೇಲಿ, ಜೊಯಿಡಾ, ಶಿರಸಿ ಹಾಗೂ ಮುಂಡಗೋಡಿನ ತಲಾ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಶುಕ್ರವಾರ ಪತ್ತೆಯಾದ ಸೋಂಕಿತರ ಪೈಕಿ ಮೂವರು ಭಟ್ಕಳದವರಾಗಿದ್ದು, ಶಿರಸಿ ಹಾಗೂ ಜೊಯಿಡಾದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸದ್ಯ ಜಿಲ್ಲೆಯಲ್ಲಿ ಒಟ್ಟು 268 ಸೋಂಕಿತರಿದ್ದು, ಎರಡು ಸಾವು ಸಂಭವಿಸಿದೆ. 162 ಮಂದಿ ಗುಣಮುಖರಾಗಿದ್ದು, 134 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details