ಶಿರಸಿ(ಉತ್ತರಕನ್ನಡ) : ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐವರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಜಾನುವಾರು ಸಾಗಾಟ: ಐವರ ಬಂಧನ - ಉತ್ತರಕನ್ನಡ ಸುದ್ದಿ
ಶಿರಸಿ ತಾಲೂಕಿನ ದೇವನಳ್ಳಿಯಿಂದ ಧಾರವಾಡಕ್ಕೆ ಸಾಗಿಸುತ್ತಿದ್ದ ಒಂದು ಎಮ್ಮೆ ಹಾಗೂ ಒಂದು ಹಸುವನ್ನು ಗ್ರಾಮೀಣ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಅಕ್ರಮವಾಗಿ ಜಾನುವಾರು ಸಾಗಾಟ: ಐವರ ಬಂಧನ
ಸರಗುಪ್ಪ ಗ್ರಾಮದ ಸಂತೋಷ ಪದಯ್ಯ ಜೈನ್, ಎನ್.ಎಸ್.ಜಡ್ಡಿ, ಖೂರ್ಸೆಯ ಸೈಯದ್ ಮುಬಿನ್ ಇಮಾಮಸಾಬ್, ಧಾರವಾಡದ ಅಶೋಕ ಪಾರಿಶನಾಥ ದುಗ್ಗನಕೇರಿ, ರಾಜು ಭೀಮಪ್ಪ ಬಳಗೇರಿ ಹಾಗೂ ಜಾನುರಾಮ ಖೂಕ್ರೆ ಬಂಧಿತರು. ಆರೋಪಿಗಳು ಶಿರಸಿ ತಾಲೂಕಿನ ದೇವನಳ್ಳಿಯಿಂದ ಧಾರವಾಡಕ್ಕೆ ಸಾಗಿಸುತ್ತಿದ್ದ ಒಂದು ಎಮ್ಮೆ ಹಾಗೂ ಒಂದು ಹಸುವನ್ನು ರಕ್ಷಿಸಲಾಗಿದೆ.
ಈ ಕುರಿತು ಗ್ರಾಮೀಣ ಠಾಣೆ ಪಿಎಸ್ಐ ನಂಜಾ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.