ಕರ್ನಾಟಕ

karnataka

ETV Bharat / state

ಜೆಡಿಎಸ್​​​​ ಕಾರ್ಯಕರ್ತನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಶಾಸಕಿ ರೂಪಾಲಿ ನಾಯ್ಕ - undefined

ಜೆಡಿಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ವೇಳೆ ಸ್ಥಳಕ್ಕಾಗಮಿಸಿದ ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತರಿಗೆ ಅವಾಜ್ ಹಾಕಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಗಲಾಟೆ

By

Published : Apr 23, 2019, 5:33 PM IST

ಕಾರವಾರ: ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತರಿಗೆ ಅವಾಜ್ ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ವೋದಯ ನಗರದಲ್ಲಿ ನಡೆದಿದೆ.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಗಲಾಟೆ

ನಗರದ ದಿವೇಕರ್ ಕಾಲೇಜು ಎದುರಿನ ಮತಗಟ್ಟೆಯ ಬಳಿ ಘಟನೆ ನಡೆದಿದೆ. ಜೆಡಿಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ವೇಳೆ ಸ್ಥಳಕ್ಕಾಗಮಿಸಿದ ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಆನಂದ್​ ಅಸ್ನೋಟಿಕರ್ ರೌಡಿಸಂ ಮಾಡಿಸುತ್ತಿದ್ದಾರೆ. ನನ್ನ 10 ಲಕ್ಷ ತಿಂದಿದ್ದೀರಾ. ನಿನ್ನ ತಂದೆ ಒಂದ್ ಪಕ್ಷ, ತಾಯಿ ಒಂದ್ ಪಕ್ಷ. ನಂಗೆ ಹೇಳುತ್ತೀಯಾ? ಆನಂದ್​ ಅಸ್ನೋಟಿಕರ್ ಈಗಲೇ ಕತ್ತಿ ಕೊಟ್ಟಿದ್ದಾನಾ? ಮರ್ಯಾದೆ ಕಾಣೋದಿಲ್ಲಾ. ಆ ಪಕ್ಷ ಈ ಪಕ್ಷ ಅಂತಾ ದುಡ್ಡು ತಿನ್ನೋರು ನೀವು. ಪಕ್ಷದಲ್ಲಿ ನಿಯತ್ತು ಇಲ್ವಾ. ಊರು ಹಾಳು ಮಾಡೋಕೆ ಬಂದಿದ್ದೀರಿ. ಒಂದು ವರ್ಷ ಗೂಂಡಾಗಿರಿ ಕಡಿಮೆಯಾಗಿತ್ತು. ಮತ್ತೆ ಸ್ಟಾರ್ಟ್ ಆಯ್ತಾ ಎಂದು ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತನೊಬ್ಬನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಗಲಾಟೆ ಆಗುವುದನ್ನು ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕಿ ಮಾತನ್ನು ಕೇಳಿ ದಂಗಾಗಿದ್ದು, ಬಳಿಕ ಸಮಾಧಾನಿಸಿ ಕಳುಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details