ಕರ್ನಾಟಕ

karnataka

ETV Bharat / state

ದೋಣಿ ಪಲ್ಟಿಯಾಗಿ ನಾಪತ್ತೆಯಾಗಿದ್ದ ಮೀನುಗಾರ ಶವವಾಗಿ ಪತ್ತೆ - Fishing man Death

ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲೂಕಿನ ಪಾವಿನಕುರ್ವ ಬಳಿ ನಡೆದಿದೆ.

ದೋಣಿ ಪಲ್ಟಿಯಾಗಿ ನಾಪತ್ತೆಯಾಗಿದ್ದ ಮೀನುಗಾರ ಶವವಾಗಿ ಪತ್ತೆ

By

Published : Aug 18, 2019, 3:24 PM IST

ಕಾರವಾರ:ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಸಮುದ್ರ ಪಾಲಾಗಿದ್ದ ಮೀನುಗಾರ ಹೊನ್ನಾವರ ತಾಲೂಕಿನ ಪಾವಿನಕುರ್ವ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

ಹೊನ್ನಾವರದ ತನ್ವೀರ್(22) ಶವ ಪತ್ತೆಯಾದ ಮೀನುಗಾರ.

ಶನಿವಾರ ಎರಡು ದೋಣಿಗಳ ಮೂಲಕ ಒಟ್ಟು ಐವರು ಮೀನುಗಾರಿಕೆಗೆ ತೆರಳಿದಾಗ ಸಮುದ್ರದ ಅಲೆಗೆ ಸಿಕ್ಕಿ ದೋಣಿ ಪಲ್ಟಿಯಾಗಿತ್ತು. ಪರಿಣಾಮದೋಣಿಯಲ್ಲಿದ್ದ ನಾಲ್ವರು ಈಜಿ ಪುನಃ ಬೋಟ್ ಏರಿದ್ದರು. ಆದರೆ ತನ್ವೀರ್ ಮಾತ್ರ ಸಮುದ್ರ ಪಾಲಾಗಿದ್ದ. ಈತನಿಗಾಗಿ ಹುಡುಕಾಟ ನಡೆಸಲಾಗಿತ್ತಾದರೂ ಸಿಕ್ಕಿರಲಿಲ್ಲ. ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ABOUT THE AUTHOR

...view details