ಕಾರವಾರ (ಉತ್ತರಕನ್ನಡ): ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗುತ್ತಿದ್ದಾಗ ಏಳು ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಮಲ್ಪೆ ಮೂಲದ ದಿನಕರ ಕರಿಕಲ್ ಎಂಬುವವರಿಗೆ ಸೇರಿದ ಶ್ರೀಸೌಪರ್ಣಿಕಾ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬೋಟ್ನಲ್ಲಿ ಏಳು ಮೀನುಗಾರರು ಮೀನುಗಾರಿಕೆ ನಡೆಸುತ್ತ ಕಾರವಾರದಿಂದ ಸುಮಾರು ಎಂಟು ನಾಟಿಕಲ್ ಮೈಲಿ ದೂರದಲ್ಲಿರುವ ಲೈಟ್ಹೌಸ್ ಬಳಿ ಬಂದಾಗ ಬೋಟಿನ ತಳಪಾಯ ಒಡೆದು ನೀರು ಬೋಟ್ ಒಳಗೆ ಸೇರತೊಡಗಿತ್ತು. ತಕ್ಷಣ ಮೀನುಗಾರರು ಸಹಾಯಕ್ಕಾಗಿ ಕರಾವಳಿ ಕಾವಲು ಪೊಲೀಸರಲ್ಲಿ ವಿನಂತಿಸಿದ್ದರು.