ಕರ್ನಾಟಕ

karnataka

ETV Bharat / state

ಸಮುದ್ರದ ಮಧ್ಯೆ ಸಿಲುಕಿರುವ ಮೀನುಗಾರರು: ರಕ್ಷಣೆಗೆ ಮುಂದಾದ ಕರಾವಳಿ ಕಾವಲು ಪೊಲೀಸ್​ ಪಡೆ - Lollem of Goa

ಮೀನುಗಾರಿಕೆಗೆ ತೆರಳಿದ ಬೋಟ್​ನ ಎಂಜಿನ್ ಬಂದ್ ಆಗಿ ರಾಜ್ಯದ 8 ಜನ ಮೀನುಗಾರರು ಗೋವಾ ರಾಜ್ಯದ ಲೋಲೆಮ್ ಬಳಿ ಸಿಲುಕಿಕೊಂಡಿದ್ದಾರೆ.

ಸಮುದ್ರ ಮಧ್ಯೆ ಸಿಲುಕಿರುವ ಮೀನುಗಾರರು: ರಕ್ಷಣೆಗೆ ಮುಂದಾದ ಕರಾವಳಿ ಕಾವಲು ಪೊಲೀಸ್ ಪಡೆ

By

Published : Oct 26, 2019, 9:44 AM IST

Updated : Oct 26, 2019, 3:18 PM IST

ಕಾರವಾರ: ಮೀನುಗಾರಿಕೆಗೆ ತೆರಳಿದ ಬೋಟ್​ನ ಎಂಜಿನ್ ಬಂದ್ ಆಗಿ ರಾಜ್ಯದ 8 ಜನ ಮೀನುಗಾರರು ಗೋವಾ ರಾಜ್ಯದ ಲೋಲೆಮ್ ಬಳಿ ಸಿಲುಕಿಕೊಂಡಿದ್ದಾರೆ.

ಸಮುದ್ರದ ಮಧ್ಯೆ ಸಿಲುಕಿರುವ ಮೀನುಗಾರರು: ರಕ್ಷಣೆಗೆ ಮುಂದಾದ ಕರಾವಳಿ ಕಾವಲು ಪೊಲೀಸ್​ ಪಡೆ

ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ಬೋಟ್​ನಲ್ಲಿದ್ದ ಮೀನುಗಾರರು, ಉಡುಪಿಯಿಂದ ಮೀನುಗಾರಿಕೆಗೆ ಗೋವಾ ಕಡೆ ತೆರಳುವಾಗ ಎಂಜಿನ್ ಬಂದ್ ಆಗಿದೆ. ಹೀಗಾಗಿ ಸಮುದ್ರದ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಅಬ್ಬರ ಹೆಚ್ಚಿರುವ ಕಾರಣ ಆತಂಕದಲ್ಲಿರುವ ಮೀನುಗಾರರು, ರಕ್ಷಣೆಗಾಗಿ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ರಾಜ್ಯದ ಆಧಿಕಾರಿಗಳು ಬೋಟ್ ಹಾಗೂ ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Last Updated : Oct 26, 2019, 3:18 PM IST

ABOUT THE AUTHOR

...view details